Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ಆನ್ಲೈನ್ ಗೇಮಿಂಗ್ ಮತ್ತು ಜೂಜಾಟದ ಜಾಹೀರಾತುಗಳ ಮೇಲೆ ನ್ಯಾಯಾಲಯ ತಡೆ ನೀಡಿದ ನಂತರ, ಬಿಸಿಸಿಐ ಗೇಮಿಂಗ್ ಕಂಪನಿಯೊಂದರ ಪ್ರಾಯೋಜಕತ್ವದಿಂದ ಹಿಂದೆ ಸರಿದರೂ, ಅಪೋಲೊ ಟೈರ್ಸ್ ಜೊತೆ ಹೊಸ ಒಪ್ಪಂದ ಮಾಡಿಕೊಂಡು ಹೆಚ್ಚಿನ ಲಾಭ ಪಡೆಯಿತು. ಇದು ಕ್ರಿಕೆಟ್ ವ್ಯವಸ್ಥೆಯ ಶಕ್ತಿಯನ್ನು ತೋರಿಸುವ ಸ್ಪಷ್ಟ ಉದಾಹರಣೆ.
ಇದಕ್ಕೆ ವಿರುದ್ಧವಾಗಿ, ಫುಟ್ಬಾಲ್ ಕ್ಷೇತ್ರ ತೀವ್ರ ಸಂಕಷ್ಟ ಎದುರಿಸುತ್ತಿದೆ. ಐಎಸ್ಎಲ್ ಆಯೋಜಿಸುತ್ತಿದ್ದ ಎಫ್‌ಎಸ್‌ಡಿಎಲ್ ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ನಡುವಿನ 15 ವರ್ಷದ ಮಾಸ್ಟರ್ ರೈಟ್ಸ್ ಒಪ್ಪಂದ ಮುಗಿದ ನಂತರ, ಹೊಸ ಆರ್ಥಿಕ ಪಾಲುದಾರರು ಸಿಗದೆ ಪ್ರಸಕ್ತ ಋತುವಿನ ಟೂರ್ನಿಯೇ ಸ್ಥಗಿತಗೊಂಡ ಸ್ಥಿತಿ ನಿರ್ಮಾಣವಾಯಿತು.
ಐಎಸ್ಎಲ್ ಸ್ಥಗಿತದಿಂದ 14 ಕ್ಲಬ್ಗಳ ಕಾರ್ಯಾಚರಣೆಗೆ ಧಕ್ಕೆಯಾಗಿದೆ. ಆಟಗಾರರು, ತರಬೇತುದಾರರು, ವೈದ್ಯಕೀಯ ಸಿಬ್ಬಂದಿ, ವಿಶ್ಲೇಷಕರು ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಕುತ್ತು ಬಂದಿದೆ. ಈ ಬೆಳವಣಿಗೆ ‘ಆಟಗಾರರ ಹಕ್ಕುಗಳ ಉಲ್ಲಂಘನೆ’ ಎಂದು ಫಿಫ್ಪ್ರೊ ಹೇಳಿದ್ದು, ಫಿಫಾ ಹಾಗೂ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್‌ಗೆ ವರದಿ ಸಲ್ಲಿಸಿದೆ.
ಸುನಿಲ್ ಚೆಟ್ರಿ, ಗುರುಪ್ರೀತ್ ಸಿಂಗ್ ಸಂಧು, ಸಂದೇಶ್ ಜಿಂಗಾನ್ ಸೇರಿದಂತೆ ಹಿರಿಯ ಆಟಗಾರರು ಫಿಫಾ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ವಿಡಿಯೊ ಬಿಡುಗಡೆ ಮಾಡಿದ್ದಾರೆ. “ನಮಗೆ ಆಡಲು ಅವಕಾಶ ಕೊಡಿ. ಭಾರತೀಯ ಫುಟ್ಬಾಲ್ ಉಳಿಸಿ” ಎಂಬ ಅವರ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಭಾರೀ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯವು ಫೆಬ್ರವರಿ 14ರಿಂದ ಐಎಸ್ಎಲ್ ಆರಂಭಿಸಲು ಹಸಿರು ನಿಶಾನೆ ನೀಡಿದೆ. ಆದರೆ, ಪ್ರಾಯೋಜಕರ ಕೊರತೆಯಿಂದ ಸರ್ಕಾರವೇ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಎಐಎಫ್ಎಫ್ ಮತ್ತು ಕ್ರೀಡಾ ಸಚಿವಾಲಯದ ಅಸಮರ್ಪಕ ಕಾರ್ಯವೈಖರಿಯನ್ನು ಬಹಿರಂಗಪಡಿಸಿದೆ.
ಅರ್ಜೆಂಟೀನಾ ದಂತಕಥೆ ಲಯೊನೆಲ್ ಮೆಸ್ಸಿಯ ಭಾರತ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗಿದೆ. ಆದರೆ, ಫುಟ್ಬಾಲ್ ಅಭಿವೃದ್ಧಿಗೆ ಹೂಡಿಕೆ ಮಾಡುವವರು ಯಾರೂ ಇಲ್ಲ ಎಂಬ ಸಂದೇಶ್ ಜಿಂಗಾನ್ ಅವರ ಬೇಸರ ಗಮನಾರ್ಹವಾಗಿದೆ. ಐಎಸ್ಎಲ್ ಆಯೋಜನೆಗೆ ಟೆಂಡರ್ ಕರೆಯಲಾದಾಗ ಎಐಎಫ್ಎಫ್‌ಗೆ ದೊರೆತ ನೀರಸ ಪ್ರತಿಕ್ರಿಯೆಯೇ ಇದರ ಸಾಕ್ಷಿ.
ಫಿಫಾ ರ್ಯಾಂಕಿಂಗ್‌ನಲ್ಲಿ ಭಾರತ 142ನೇ ಸ್ಥಾನಕ್ಕೆ ಕುಸಿದಿದೆ. ಸುನಿಲ್ ಚೆಟ್ರಿಯಂತಹ ದಿಗ್ಗಜರ ನಿವೃತ್ತಿಯಿಂದ ಹೊಸ ಪ್ರತಿಭೆಗಳನ್ನು ತಯಾರಿಸುವ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ. ಐಎಸ್ಎಲ್ ಮತ್ತು ದೇಶೀಯ ಟೂರ್ನಿಗಳು ಪರಸ್ಪರ ಪೂರಕವಾಗಿ ಬೆಳೆಯಬೇಕು. ಸಂತೋಷ್ ಟ್ರೋಫಿಯಂತಹ ಟೂರ್ನಿಗಳ ವೈಭವ ಮರಳಬೇಕಿದೆ.
ಭಾರತ 2036ರ ಒಲಿಂಪಿಕ್ಸ್ ಆತಿಥ್ಯದ ಕನಸು ಕಾಣುತ್ತಿದೆ. ಆದರೆ, ಕನಿಷ್ಠ ಆತಿಥೇಯ ಕೋಟಾದಲ್ಲಿ ಸ್ಪರ್ಧಿಸುವಂತಹ ಫುಟ್ಬಾಲ್ ತಂಡವನ್ನಾದರೂ ರೂಪಿಸುವ ವ್ಯವಸ್ಥೆ ತುರ್ತಾಗಿ ಬೇಕಾಗಿದೆ. ಮೂಲಸೌಕರ್ಯ, ತರಬೇತಿ ಮತ್ತು ಆಡಳಿತಾತ್ಮಕ ಸುಧಾರಣೆಗಳಿಲ್ಲದೆ ಭಾರತೀಯ ಫುಟ್ಬಾಲ್‌ನ ಪುನರುತ್ಥಾನ ಸಾಧ್ಯವಿಲ್ಲ.