ಮೈಸೂರು ದಸರಾದಲ್ಲಿ ಸ್ಯಾಂಡಲ್‌ವುಡ್‌ ದರ್ಬಾರ್‌; ತಾರೆಯರಿಗಾಗಿ ಏನಿದೆ ವಿಶೇಷ?

ಮೈಸೂರು ದಸರಾ ಜಂಬೂಸವಾರಿಗೆ ಈ ಬಾರಿ ಸ್ಯಾಂಡಲ್‌ವುಡ್‌ ತಾರೆಯರ ಭರ್ಜರಿ ಸಾಥ್‌ ಸಿಗಲಿದೆ. ರವಿಚಂದ್ರನ್‌, ಶಿವರಾಜ್‌ಕುಮಾರ್‌, ಯಶ್‌, ಸುದೀಪ್‌, ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ಸೇರಿದಂತೆ 30ಕ್ಕೂ ಹೆಚ್ಚು ತಾರೆಯರು ವಿಶೇಷ ‘ಅಂಬಾರಿ ಬಸ್‌’ನಲ್ಲಿ ಸಾಗುತ್ತಾ ಅಭಿಮಾನಿಗಳಿಗೆ ಕೈಬೀಸಲಿದ್ದಾರೆ. ಇದರ ಜೊತೆಗೆ ಕನ್ನಡ ಚಿತ್ರರಂಗದ 93 ವರ್ಷಗಳ ಇತಿಹಾಸ ಹಾಗೂ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಪುನೀತ್‌ ರಾಜ್‌ಕುಮಾರ್‌ ಅವರ ಕೊಡುಗೆಯನ್ನು ಸಾರುವ ವಿಶೇಷ ಸ್ತಬ್ಧಚಿತ್ರವೂ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿದೆ. ಜನದಟ್ಟಣೆ ಮತ್ತು ಭದ್ರತೆಯ ದೃಷ್ಟಿಯಿಂದ ತಾರೆಯರ ಮೆರವಣಿಗೆಯನ್ನು ಅರಮನೆ ಆವರಣದಿಂದ ಕೆ.ಆರ್‌. ವೃತ್ತದವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-09-10 12:25:38
No Reviews