Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ಬೆಂಗಳೂರು:
ಬಿಗ್ಬಾಸ್ ಕನ್ನಡ ಸೀಸನ್ 12 ಗೆದ್ದು ರಾಜ್ಯದಾದ್ಯಂತ ಜನಪ್ರಿಯರಾಗಿರುವ ಗಿಲ್ಲಿ, ಇಂದು ವೇದಿಕೆ ಏರಿದರೆ ಚಪ್ಪಾಳೆ ಮತ್ತು ಶಿಳ್ಳೆಗಳ ಮಳೆಯೇ ಸುರಿಯುತ್ತದೆ. ಆದರೆ ಈ ಯಶಸ್ಸಿನ ಹಿಂದೆ ಒಂದು ಹೋರಾಟದ ಕಥೆಯಿದೆ. ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಏನಾಗಿತ್ತು ಎಂಬುದನ್ನು ಅವರ ಗುರು ಹಾಗೂ ಗೆಳೆಯರು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ.
ಗಿಲ್ಲಿಯ ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ಗಮನಿಸಿದ ಅವರ ಗುರು, ವಿವಿಧ ಜಿಲ್ಲೆಗಳಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳಿಗೆ ಗಿಲ್ಲಿಯನ್ನು ಆಹ್ವಾನಿಸಿದ್ದರು. ಈ ಬಗ್ಗೆ ಸ್ವತಃ ಗಿಲ್ಲಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಗುರುಗಳ ಹೇಳಿಕೆಯಂತೆ, ಗಿಲ್ಲಿ ಮೊದಲ ಬಾರಿ ವೇದಿಕೆ ಏರಿದಾಗ ತುಂಬಾ ಭಯಗೊಂಡಿದ್ದರು. ಯೂಟ್ಯೂಬ್ ವಿಡಿಯೋದಲ್ಲಿದ್ದ ಅದೇ ವೇಷದಲ್ಲಿ ವೇದಿಕೆ ಏರಿದ ಗಿಲ್ಲಿ, ಕೇವಲ ಐದು ನಿಮಿಷ ಮಾತ್ರ ನಿಲ್ಲಲು ಸಾಧ್ಯವಾಗಲಿಲ್ಲ. ನರ್ವಸ್ ಆಗಿ ಕೆಲವು ತಮಾಷೆ ಡೈಲಾಗ್ಗಳನ್ನು ಹೇಳಿ, ವೇದಿಕೆಯಿಂದ ಇಳಿದುಬಿಟ್ಟರಂತೆ.
ಅದಾದ ನಂತರ ಗುರುಗಳು,
“ಕನಿಷ್ಟ 30 ನಿಮಿಷವಾದರೂ ಜನರನ್ನು ಎಂಗೇಜ್ ಮಾಡಬೇಕು, ನಗಿಸಬೇಕು”
ಎಂದು ಸಲಹೆ ನೀಡಿದರಂತೆ. ಇದೇ ಮಾತು ಗಿಲ್ಲಿಗೆ ತಿರುವು ತಂದಿತು.
ಆ ಬಳಿಕ ಗಿಲ್ಲಿ ಗಂಭೀರವಾಗಿ ತಯಾರಿ ಆರಂಭಿಸಿದರು. ಬೇರೆ ಭಾಷೆಗಳ ಕಾಮಿಡಿ ವಿಡಿಯೋಗಳನ್ನು ನೋಡುತ್ತಾ, ಪಂಚ್ ಡೈಲಾಗ್ಗಳು ಮತ್ತು ಡೆಲಿವರಿಗಳನ್ನೆಲ್ಲ ಕಲಿಯುತ್ತಿದ್ದರು. ಯಾರಾದರೂ ಎದುರಿಗೆ ಇದ್ದರೆ ಅಥವಾ ಮಾತುಕತೆ ನಡೆಯುತ್ತಿದ್ದರೆ, ಗಿಲ್ಲಿ ಮೂರು-ನಾಲ್ಕು ಗಂಟೆ ನಿರಂತರವಾಗಿ ಮಾತನಾಡಿ ಜನರನ್ನು ನಗಿಸಬಲ್ಲರು. ಆದರೆ ಒಬ್ಬರೇ ವೇದಿಕೆಯಲ್ಲಿ ನಿಲ್ಲುವುದು ಆರಂಭದಲ್ಲಿ ಅವರಿಗೆ ಸವಾಲಾಗಿತ್ತೆಂದು ಗುರು ನೆನಪಿಸಿಕೊಂಡಿದ್ದಾರೆ.
‘ಭರ್ಜರಿ ಬ್ಯಾಚುಲರ್’ ಬಳಿಕ ಗಿಲ್ಲಿ ಮತ್ತು ಗಗನಾ ಅವರನ್ನು ಹಲವು ಶೋಗಳಿಗೆ ಕರೆದುಕೊಂಡು ಹೋಗಿದ್ದೇವೆ. ಅವರಿಬ್ಬರ ಕೆಮಿಸ್ಟ್ರಿ ಜನರಿಗೆ ಬಹಳ ಇಷ್ಟವಾಗಿತ್ತು. ಆದರೆ ಎಲ್ಲೆಡೆ ಅವರನ್ನು ಜೋಡಿಯಂತೆ ಬಿಂಬಿಸಲು ಆರಂಭಿಸಿದಾಗ, ಗಗನಾ ಅವರ ಮನೆಯವರಿಗೆ ಅದು ಇಷ್ಟವಾಗಲಿಲ್ಲ. ಇದೇ ವಿಚಾರ ಇಬ್ಬರ ನಡುವೆ ಸಣ್ಣ ಈಗೋ ಕ್ಲ್ಯಾಷ್ಗೆ ಕಾರಣವಾಯಿತೆಂದು ಗುರು ಹೇಳಿದ್ದಾರೆ.
ಗಿಲ್ಲಿ ಮತ್ತು ಗಗನಾ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆಯೂ ಇದ್ದಿತ್ತೆಂದೂ, ಅದು ಆಗ ಸಾಧ್ಯವಾಗಲಿಲ್ಲ ಎಂದೂ ಗುರು ಹೇಳಿದ್ದಾರೆ. ಈಗ ಕಾವ್ಯಾ ಮತ್ತು ಗಿಲ್ಲಿಯನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡುವ ಯೋಜನೆ ನಡೆಯುತ್ತಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಒಂದು ಕಾಲದಲ್ಲಿ ಐದು ನಿಮಿಷವೂ ವೇದಿಕೆಯಲ್ಲಿ ನಿಲ್ಲಲಾಗದ ಗಿಲ್ಲಿ, ಇಂದು ಸಾವಿರಾರು ಜನರನ್ನು ನಗಿಸುವ ಸೆಲೆಬ್ರಿಟಿಯಾಗಿ ಬೆಳೆದಿದ್ದಾರೆ. ಭಯ, ಪರಿಶ್ರಮ ಮತ್ತು ನಿರಂತರ ಕಲಿಕೆಯೇ ಗಿಲ್ಲಿಯನ್ನು ಈ ಹಂತಕ್ಕೆ ತಂದಿದೆ.