ನಾಳೆ ರಾಜ್ಯದ ಮೂಲೆ ಮೂಲೆಗಳಿಂದ ಸಾರಿಗೆ ನೌಕರರ ಪ್ರತಿಭಟನೆ

ನಾಳೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಾರಿಗೆ ನೌಕರರು ಬೆಂಗಳೂರಿಗೆ ಆಗಮಿಸಲಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಫ್ರೀಡಂ ಪಾರ್ಕ್‌ನಲ್ಲಿ “ಬೆಂಗಳೂರು ಚಲೋ” ಪ್ರತಿಭಟನೆ ನಡೆಯಲಿದೆ.

ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದ್ದು, ಸರ್ಕಾರದ ಮುಂದೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಮೊದಲ ಬೇಡಿಕೆ –
2020ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗೆ ಬಾಕಿ ಇರುವ 38 ತಿಂಗಳ ವೇತನ ಪರಿಷ್ಕರಣೆ ಹಿಂಭಾಕಿ ಬಿಡುಗಡೆ.

ಎರಡನೇ ಬೇಡಿಕೆ –
 2024ರಿಂದ ಮುಂದಿನ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ತಕ್ಷಣ ಕ್ರಮ.

ಈ ಬೇಡಿಕೆಗಳಿಗೆ ನಾಳೆ ಸಂಜೆವರೆಗೂ ಸರ್ಕಾರ ಸ್ಪಂದಿಸದಿದ್ದರೆ,
 ನಾಡಿದ್ದು ಜನವರಿ 30ರಿಂದ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.

ಇದೇ ವೇಳೆ, ಕೆಎಸ್‌ಆರ್‌ಟಿಸಿ ನೌಕರರ ಕೂಟವೂ ಹೋರಾಟಕ್ಕೆ ಬೆಂಬಲ ಘೋಷಿಸಿದ್ದು,
 ಶಿವರಾತ್ರಿ ಬಳಿಕ, ಫೆಬ್ರವರಿ 15ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.

ಇನ್ನೊಂದೆಡೆ, ಸಾರಿಗೆ ಇಲಾಖೆ ಪ್ರತಿಭಟನಾ ನಿರತ ನೌಕರರಿಗೆ ಶಾಕ್ ನೀಡಿದೆ.
 ಯಾವುದೇ ಮುಷ್ಕರಕ್ಕೆ ಅವಕಾಶ ಇಲ್ಲ
 ಮುಷ್ಕರಕ್ಕೆ ಬೆಂಬಲ ಸೂಚಿಸುವಂತಿಲ್ಲ
 ಗುರುವಾರ ಡ್ಯೂಟಿಗೆ ಹಾಜರಾಗದಿದ್ದರೆ “ನೋ ವರ್ಕ್ ನೋ ಪೇ”

ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.

ಒಟ್ಟಾರೆ, ನಾಳೆಯ ಬೆಂಗಳೂರು ಚಲೋ ಪ್ರತಿಭಟನೆ ಮೇಲೆ ರಾಜ್ಯದ ಗಮನ ನೆಟ್ಟಿದ್ದು,
 ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆ?
 ಸಾಮೂಹಿಕ ರಾಜೀನಾಮೆ ನಿಜವಾಗುತ್ತಾ?

ಇದೇ ಈಗ ರಾಜ್ಯದ ಸಾರಿಗೆ ವ್ಯವಸ್ಥೆ ಭವಿಷ್ಯಕ್ಕೆ ದೊಡ್ಡ ಪ್ರಶ್ನೆಯಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-28 10:32:29
No Reviews