ಯಜಮಾನ ದಿಢೀರ್ ಅಂತ್ಯ: ಮಧುಶ್ರೀ ಬೇಸರ

ವಿಶ್ವವಾಣಿ ಟಿವಿಗೆ ನೀಡಿದ ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ನಟಿ ಮಧುಶ್ರೀ ಭೈರಪ್ಪ, ‘ಯಜಮಾನ’ ಧಾರಾವಾಹಿ ದಿಢೀರ್ ಅಂತ್ಯ ಕಂಡಿದ್ದು ತಮ್ಮಗೆ ತುಂಬಾ ಬೇಸರ ತಂದಿದೆ ಎಂದು ಹೇಳಿದ್ದಾರೆ. ತಮ್ಮ ಮೊದಲ ಧಾರಾವಾಹಿಯಲ್ಲೇ ‘ಝಾನ್ಸಿ’ ಎಂಬ ಅತ್ಯುತ್ತಮ ಪಾತ್ರ ಸಿಕ್ಕಿದ್ದು, ಆ ಪಾತ್ರ ಮುಗಿಯುತ್ತಿರುವುದೇ ಹೆಚ್ಚು ನೋವು ಕೊಡುತ್ತಿದೆ ಎಂದು ಅವರು ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಧಾರಾವಾಹಿ ಮುಗಿದಿದ್ದು ವೀಕ್ಷಕರಿಗೂ ಅಚ್ಚರಿ ತಂದಿದ್ದು, ಸಾಮಾನ್ಯವಾಗಿ ಮೂರು ತಿಂಗಳು ಮುಂಚೆಯೇ ಮಾಹಿತಿ ನೀಡುವ ಪದ್ಧತಿ ಇದ್ದರೂ ಈ ಬಾರಿ ಕೇವಲ ಎರಡು ದಿನಗಳ ಮೊದಲು ಮಾತ್ರ ತಂಡಕ್ಕೆ ತಿಳಿಸಲಾಗಿದೆ ಎಂದು ಮಧುಶ್ರೀ ಹೇಳಿದ್ದಾರೆ. ತಮ್ಮ ಪಾತ್ರಕ್ಕಾಗಿ 200% ಶ್ರಮ ಹಾಕಿದ್ದು, ಆರಂಭದಲ್ಲೇ ಸುಮಾರು 4 ಲಕ್ಷ ರೂ. ಖರ್ಚು ಮಾಡಿ ಸಂಪೂರ್ಣ ಡೆಡಿಕೇಶನ್‌ನೊಂದಿಗೆ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-11 13:25:56
No Reviews