ನೀರಿಗಾಗಿ ರಿಲಯನ್ಸ್ ಅಭಿಯಾನ ಆರಂಭ

ಭಾರತದ ಜಲಮೂಲಗಳ ಸಂರಕ್ಷಣೆಗೆ ಕೈಜೋಡಿಸಿದ ಅದ್ಭುತ ಜನಚಳವಳಿ
ರಿಲಯನ್ಸ್ ಫೌಂಡೇಷನ್ ನೇತೃತ್ವದ #Water4Life ಅಭಿಯಾನದಲ್ಲಿ ವಿವಿಧ ಕ್ಷೇತ್ರಗಳ ಜನರು ಒಟ್ಟಾಗಿ ಪಾಲ್ಗೊಂಡು ಸ್ವಚ್ಛತಾ ಕಾರ್ಯಗಳ ಜೊತೆಗೆ ದೀರ್ಘಾವಧಿ ನೀರಿನ ಆಡಳಿತ, ಸಮುದಾಯ ಮಾಲೀಕತ್ವ ಮತ್ತು ಜಲ ಸಾಕ್ಷರತೆಗಾಗಿ ಜಾಗೃತಿ ಮೂಡಿಸಿದರು. ರೈತರು, ಮಹಿಳಾ ಗುಂಪುಗಳು, ಯುವಕರು, ಸ್ಥಳೀಯ ಸಂಸ್ಥೆಗಳು, ಆರೋಗ್ಯ ಸಹಾಯಕರು ಮತ್ತು ಸ್ವಯಂಸೇವಕರು ಸೇರಿ ಜಲಮೂಲಗಳಿಂದ ಪ್ಲಾಸ್ಟಿಕ್ ಮತ್ತು ಘನ ತ್ಯಾಜ್ಯ ತೆರವುಗೊಳಿಸಿ, ನೀರಿನ ಹರಿವು ಸುಧಾರಣೆಗೆ ಪುನರುಜ್ಜೀವನ ಕಾರ್ಯಗಳನ್ನು ಕೈಗೊಂಡರು.

15 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 108 ಜಿಲ್ಲೆಗಳಲ್ಲಿ 85,000 ಕೆ.ಜಿ.ಗೂ ಹೆಚ್ಚು ತ್ಯಾಜ್ಯ ಸಂಗ್ರಹಿಸಲಾಯಿತು. 2,500 ಗ್ರಾಮ ಹವಾಮಾನ ರಕ್ಷಕರು ಪ್ರಮುಖ ಪಾತ್ರವಹಿಸಿ ಸಮುದಾಯ ಚಾಲಿತ ಜಲ ಸಂರಕ್ಷಣಾ ಚಳವಳಿಗೆ ಉತ್ತೇಜನ ನೀಡಿದರು. ನರ್ಮದಾ ನದಿ ಘಾಟ್‌ಗಳಿಂದ ಕೊಚ್ಚಿ ಕಡಲ ತೀರದವರೆಗೆ ಅನೇಕ ಸ್ಥಳಗಳಲ್ಲಿ ಕಾರ್ಯಗಳು ನಡೆದಿದ್ದು, ಲಕ್ಷಾಂತರ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಈ ಅಭಿಯಾನ ದಿಟ್ಟ ಹೆಜ್ಜೆಯಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-02 19:04:02
No Reviews