TVK ಗೆಲುವಿನ ಹಿಂದೆ ಇರುವ ಕನ್ನಡಿಗ ಯಾರು?

ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ (TVK) ಪಕ್ಷದಿಂದ ಇತಿಹಾಸ ನಿರ್ಮಾಣವಾಗಿದ್ದು, ದಳಪತಿ ವಿಜಯ್ ನೇತೃತ್ವದ ಪಕ್ಷ ಅಧಿಕಾರದತ್ತ ಹೆಜ್ಜೆ ಇಟ್ಟಿದೆ. ಈ ಮಧ್ಯೆ ಕನ್ನಡಿಗ ಸುನೀಲ್ ಆನಂದ್ ವಿಜಯ ಸಾಧಿಸಿರುವುದು ಗಮನ ಸೆಳೆದಿದೆ.

ಮೂಲತಃ ತುಮಕೂರು ಜಿಲ್ಲೆಯ ವಡಕೆಘಟ್ಟದವರಾದ ಸುನೀಲ್ ಆನಂದ್ ಅವರ ಕುಟುಂಬವು ಸುಮಾರು 96 ವರ್ಷಗಳ ಹಿಂದೆ ಬರಗಾಲದ ಸಂದರ್ಭದಲ್ಲಿ ತಮಿಳುನಾಡಿಗೆ ವಲಸೆ ಹೋಗಿತ್ತು. ನಂತರದ ತಲೆಮಾರು ಅಲ್ಲಿ ನೆಲೆಸಿದ್ದು, ಸುನೀಲ್ ಆನಂದ್ ಅಲ್ಲೇ ಹುಟ್ಟಿ ಬೆಳೆದಿದ್ದಾರೆ. ಶಿಕ್ಷಣವನ್ನು ತಮಿಳುನಾಡಿನಲ್ಲೇ ಪೂರೈಸಿದ ಅವರು, ಜಮೀನ್ದಾರಿ, ಅಡಿಕೆ ತೋಟ, ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಕೀಯದಲ್ಲಿ ಮೊದಲಿಗೆ ಎಐಎಡಿಎಂಕೆ (AIADMK) ಪಕ್ಷದಲ್ಲಿ ಸಕ್ರಿಯರಾಗಿದ್ದ ಸುನೀಲ್ ಆನಂದ್, ನಂತರ ವಿಜಯ್ ಅವರ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾದರು. ಅವರ ಕುಟುಂಬವೂ ರಾಜಕೀಯವಾಗಿ ಸಕ್ರಿಯವಾಗಿದ್ದು, ಸಂಬಂಧಿಕರು ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಪ್ರತಿವರ್ಷವೂ ತಮ್ಮ ಮೂಲ ಊರಾದ ವಡಕೆಘಟ್ಟಕ್ಕೆ ಭೇಟಿ ನೀಡುವುದನ್ನು ಅವರು ಮರೆಯುವುದಿಲ್ಲ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-06 13:05:06
No Reviews