ನಿರಂಜನ್ ಸುಧೀಂದ್ರ ಸಂಜನಾ ಅದ್ಧೂರಿ ಆರತಕ್ಷತೆ ಮಿಂಚಿದ ಉಪೇಂದ್ರ ದಂಪತಿ

ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಲ್ಲಿ ಕಳೆದ ಒಂದು ವಾರದಿಂದ ಮದುವೆ ಸಂಭ್ರಮ ಮನೆಮಾಡಿದ್ದು ಅವರ ಸಹೋದರ ಸುಧೀಂದ್ರ ಅವರ ಪುತ್ರ ಹಾಗೂ ನಟ ನಿರಂಜನ್ ಸುಧೀಂದ್ರ ಮತ್ತು ಸಂಜನಾ ಬಿ. ರಾಜ್ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ನವೆಂಬರ್ 15ರಂದು ಬೆಂಗಳೂರಿನಲ್ಲಿ ನಡೆದ ಅದ್ಧೂರಿ ವೆಡ್ಡಿಂಗ್ ರಿಸೆಪ್ಷನ್‌ನಲ್ಲಿ ಕುಟುಂಬಸ್ಥರು ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ಸಂಭ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ದಂಪತಿ ವಿಶೇಷವಾಗಿ ಮಿಂಚಿದ್ದು ಆರತಕ್ಷತೆಯ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-11-17 13:03:16
No Reviews