ಮಂಜುಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದೇಕೆ

ಬಿಗ್ ಬಾಸ್ ಮನೆಯಿಂದ ಹೊರಬಂದು ಮತ್ತೆ ರೀ-ಎಂಟ್ರಿ ನೀಡಿದ್ದ ಮಾಡ್ರನ್ ಮಹಾಕವಿ ಮಂಜು ಅವರ ಆಟದ ಬಗ್ಗೆ ಇದೀಗ ಕಿಚ್ಚ ಸುದೀಪ್ ಪ್ರಶ್ನೆ ಎತ್ತಿದ್ದಾರೆ. ಗೇಮ್ ಚೇಂಜರ್ ಆಗಿ ಬರುವುದಾಗಿ ಹೇಳಿದ್ದ ಮಂಜು, ಮನೆಯೊಳಗೆ ನಿರೀಕ್ಷಿತ ಬದಲಾವಣೆ ತರುವಲ್ಲಿ ವಿಫಲರಾಗಿದ್ದಾರೆಯೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಮಂಜು ಅವರ ಎಂಟ್ರಿಯಿಂದ ಸ್ಮಾರ್ಟ್ ಆದವರು ಯಾರು, ಜೋಕರ್ ಆದವರು ಯಾರು ಎಂಬ ಕುತೂಹಲವನ್ನೂ ಸುದೀಪ್ ಮೂಡಿಸಿದ್ದಾರೆ.

ಇನ್ನೊಂದೆಡೆ, ಯಶಸ್ ತೆಗೆದುಕೊಂಡ ನಿರ್ಧಾರದಿಂದ ಆಸಿಯಾ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ಈ ವಿಚಾರವೂ ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ. ಈ ಹಿಂದೆ ಮನೆಯಿಂದ ಹೊರಬಂದಿದ್ದ ಮಂಜು ಅವರಿಗೆ ವಿಶೇಷ ಅವಕಾಶ ನೀಡಿ, ಬಹುಮಾನದ ಹಣವನ್ನೂ ನೀಡಲಾಗಿತ್ತು. ಇದೀಗ ಮತ್ತೆ ಅತಿಥಿಯಾಗಿ ಮನೆಯೊಳಗೆ ಪ್ರವೇಶಿಸಿರುವ ಅವರ ಆಟದ ಬಗ್ಗೆ ಕಿಚ್ಚನ ಪ್ರಶ್ನೆಗಳು ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-11-14 18:16:09
No Reviews