ಕಂಗನಾ ಪೋಸ್ಟ್‌ಗೆ ಕಾನೂನಿನ ಬಿಸಿ… FIR ದಾಖಲು

ಶಿಮ್ಲಾದಲ್ಲಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಅತುಲ್ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಕಂಗನಾ ರಣಾವತ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196, 353 ಮತ್ತು 356ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನವೆಂಬರ್ 10ರಂದು ಎಕ್ಸ್‌ನಲ್ಲಿ ಕಂಗನಾ ಪ್ರಕಟಿಸಿದ್ದ ಪೋಸ್ಟ್‌ಗಳಲ್ಲಿ ಗಾಂಧಿ ಕುಟುಂಬದ ಸದಸ್ಯರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಲಾಗಿತ್ತು. ಸೋನಿಯಾ ಗಾಂಧಿ ಅವರನ್ನು 'ನಿಗೂಢ ವಿದೇಶಿ ಪ್ರಜೆ' ಎಂದು ಉಲ್ಲೇಖಿಸಿದ್ದ ಪೋಸ್ಟ್‌ ರಾಜಕೀಯ ಟೀಕೆಯ ಮಿತಿಮೀರಿದೆ ಹಾಗೂ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಸೃಷ್ಟಿಸುವ ಸಾಧ್ಯತೆಯಿದೆ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-11-14 10:54:52
No Reviews