ರಣವೀರ್ ಸಿಂಗ್ ಪ್ರಕರಣ ಮುಂದೂಡಿಕೆ

ಚಾಮುಂಡಿ ದೈವ ಅನುಕರಣ ವಿವಾದದಲ್ಲಿ ಸಿಲುಕಿರುವ ನಟ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್‌ಗೆ ಪರಿಷ್ಕೃತ ಕ್ಷಮಾಪಣೆ ಅಫಿಡವಿಟ್ ಸಲ್ಲಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ಭಕ್ತರ ಭಾವನೆಗಳಿಗೆ ನೋವಾಗಿದೆ ಎಂಬುದನ್ನು ಒಪ್ಪಿಕೊಂಡು, ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮುಂದೆ ವಿಚಾರಣೆ ನಡೆದಿದ್ದು, ಪ್ರಕರಣವನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ. ಈ ನಡುವೆ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿರುವ ರಣವೀರ್ ಸಿಂಗ್, ಎಲ್ಲಾ ನಂಬಿಕೆಗಳಿಗೆ ಗೌರವ ವ್ಯಕ್ತಪಡಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-10 18:49:26
No Reviews