ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ

ಕನಕಪುರ ತಾಲೂಕಿನ ಕಬ್ಬಾಳು ಕೆರೆಯಲ್ಲಿ ಸಂಭವಿಸಿದೆ. ಮೃತರನ್ನು ತನುಷ್ (18) ಹಾಗೂ ಸಂತೋಷ್ (19) ಎಂದು ಗುರುತಿಸಲಾಗಿದೆ.

ಬುಧವಾರ ಬೆಂಗಳೂರಿನ ಬನಶಂಕರಿಯ ಕಾಲೇಜೊಂದರ 11 ಮಂದಿ ವಿದ್ಯಾರ್ಥಿಗಳು ಕಬ್ಬಾಳು ದೇವಾಲಯಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದ ಬಳಿಕ ಸಮೀಪದ ಕಬ್ಬಾಳು ಕೆರೆಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಒಬ್ಬ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದನು. ಆತನನ್ನು ರಕ್ಷಿಸಲು ತೆರಳಿದ ಇನ್ನೊಬ್ಬ ವಿದ್ಯಾರ್ಥಿಯೂ ನೀರಿನಲ್ಲೇ ಮುಳುಗಿ ಮೃತಪಟ್ಟಿದ್ದಾನೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-15 14:35:37
No Reviews