ಇ20 ಪೆಟ್ರೋಲ್ ಹೆಸರಲ್ಲಿ ಗ್ರಾಹಕರಿಗೆ ಮೋಸವೇ

ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಇಂಜಿನ್ ಹಾನಿ ಹಾಗೂ ಮೈಲೇಜ್ ಕುಸಿತದ ಆತಂಕ ಎದುರಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣ ನಡೆಯುವುದಿಲ್ಲ, ತೈಲ ಕಂಪನಿಗಳ ಟರ್ಮಿನಲ್‌ಗಳಲ್ಲೇ ಈ ಪ್ರಕ್ರಿಯೆ ನಡೆಯುತ್ತದೆ ಎಂಬುದು ಬಂಕ್ ಮಾಲೀಕರ ವಾದ.

ಹೀಗಾಗಿ ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗಿದ್ದರೆ ಅದಕ್ಕೆ ತೈಲ ಕಂಪನಿಗಳೇ ಹೊಣೆ ಹೊರಬೇಕು ಎಂಬ ಆಗ್ರಹ ಕೇಳಿಬಂದಿದೆ. ಇಂಧನದ ಗುಣಮಟ್ಟದ ಬಗ್ಗೆ ಪಾರದರ್ಶಕತೆ ಇರಬೇಕು ಹಾಗೂ ಗ್ರಾಹಕರಿಗೆ ಇ10 ಅಥವಾ ಇ20 ಪೆಟ್ರೋಲ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು. ವಾಹನಗಳ ಇಂಜಿನ್‌ಗೆ ಹಾನಿಯಾಗುವ ಸಾಧ್ಯತೆಗಳಿರುವುದರಿಂದ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಗ್ರಾಹಕರ ಹಿತಾಸಕ್ತಿ ಕಾಪಾಡಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-11-10 11:48:08
No Reviews