ಬರದ ನಾಡಿನಲ್ಲಿ ಈರುಳ್ಳಿ ಬೆಳೆದು ವಿದೇಶಕ್ಕೂ ರಫ್ತು

ಮಳೆ ಕೈಕೊಟ್ಟರೂ, ನೀರಿನ ಕೊರತೆಯ ನಡುವೆಯೂ ಕೃಷಿ ಕೈಬಿಡದ ಜಂಬಗಾ (ಬಿ) ಗ್ರಾಮದ ರೈತ ಶ್ರೀಕಾಂತ್, ಎರಡು ಎಕರೆ ಲೀಜ್ ಜಮೀನಿನಲ್ಲಿ ಕೇವಲ 3 ಕೆ.ಜಿ. ಈರುಳ್ಳಿ ಬೀಜ ಬಿತ್ತನೆ ಮಾಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ನಾಲ್ಕು ತಿಂಗಳ ಪರಿಶ್ರಮದ ಫಲವಾಗಿ 80ರಿಂದ 100 ಕ್ವಿಂಟಾಲ್ ಇಳುವರಿಯ ನಿರೀಕ್ಷೆಯಲ್ಲಿದ್ದು, ಕೃಷಿಗೆ ಸುಮಾರು ₹70ರಿಂದ ₹80 ಸಾವಿರ ವೆಚ್ಚ ಮಾಡಿದ್ದಾರೆ. ರೈನ್‌ಪೈಪ್ ಮೂಲಕ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆ ಬೆಳೆದಿರುವ ಶ್ರೀಕಾಂತ್ ಅವರ ಈ ಪ್ರಯತ್ನ ಈಗ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಬೀಜ ಉತ್ಪಾದನೆಗಾಗಿ ಕಂಪನಿಯೊಂದು ಪ್ರತಿ ಕ್ವಿಂಟಾಲ್‌ಗೆ ₹5 ಸಾವಿರ ದರದಲ್ಲಿ ಈರುಳ್ಳಿ ಖರೀದಿಸಲು ಆಸಕ್ತಿ ತೋರಿಸಿದೆ. ಕಲಬುರಗಿಯ ಈರುಳ್ಳಿ ಔರಂಗಾಬಾದ್ ಮಾರ್ಗವಾಗಿ ಥೈಲ್ಯಾಂಡ್‌ಗೂ ರವಾನೆಯಾಗುತ್ತಿರುವುದು ಸ್ಥಳೀಯ ಕೃಷಿ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲೂ ಬೇಡಿಕೆ ಇರುವುದನ್ನು ತೋರಿಸುತ್ತದೆ. ಬರದ ನಡುವೆಯೂ ಸೀಮಿತ ಸಂಪನ್ಮೂಲ ಬಳಸಿ ಯಶಸ್ಸು ಕಂಡ ಶ್ರೀಕಾಂತ್ ಅವರ ಕೃಷಿ ಪ್ರಯತ್ನ ಇತರ ರೈತರಿಗೆ ಮಾದರಿಯಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-11-12 14:02:44
No Reviews