ಪುರಿ ಜಗನ್ನಾಥನ ದರ್ಶನ ಪಡೆದ ನಾಗ ಚೈತನ್ಯ ದಂಪತಿ

ಬಿಳಿ ಶರ್ಟ್ ಮತ್ತು ಪಂಚೆಯಲ್ಲಿ ನಾಗ ಚೈತನ್ಯ ಸರಳವಾಗಿ ಕಾಣಿಸಿಕೊಂಡರೆ, ಮತ್ತೊಂದೆಡೆ ಶೋಭಿತಾ ಧೂಳಿಪಾಲ ಕೆಂಪು ಬಣ್ಣದ ಸುಂದರ ಸೀರೆಯಲ್ಲಿ ಮಿಂಚಿದರು. ಜಗನ್ನಾಥ ಪುರಿ ರಥಯಾತ್ರೆಗೆ ಮುನ್ನ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಸಿನಿಮಾ ವಿಚಾರಕ್ಕೆ ಬಂದರೆ, ನಾಗ ಚೈತನ್ಯ ತಮ್ಮ ಮುಂಬರುವ ‘ವೃಷಕರ್ಮ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಕಾರ್ತಿಕ್ ದಂಡು ನಿರ್ದೇಶನದ ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದು, ಭಾರೀ ಪ್ರಮಾಣದ ಪೌರಾಣಿಕ ಹಿನ್ನೆಲೆಯ VFX ಚಿತ್ರವಾಗಲಿದೆ ಎಂದು ನಾಗ ಚೈತನ್ಯ ಹೇಳಿದ್ದಾರೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-07 10:12:13
No Reviews