ಇಸ್ರೇಲ್ ದಾಳಿಗೆ ಇರಾನ್ ವಿಮಾನ ಛಿದ್ರಛಿದ್ರ

“ನಾನು ಗುರಿಯನ್ನು ಹೊಡೆದಿದ್ದೇನೆ, ದಾಳಿಯನ್ನು ಮುಂದುವರಿಸುತ್ತೇವೆ” ಎಂದು ಪೈಲಟ್ ಹೇಳುವ ದೃಶ್ಯ ವಿಡಿಯೊದಲ್ಲಿ ಕೇಳಿಸಲಿದೆ. ಸುಮಾರು 40 ವರ್ಷಗಳ ಬಳಿಕ ಇಸ್ರೇಲ್ ವಾಯುಪಡೆ ಮಾನವಸಹಿತ ವಿಮಾನದೊಂದಿಗೆ ಈ ರೀತಿಯ ದಾಳಿ ನಡೆಸಿದೆ.

ಐಎಎಫ್ ಕಮಾಂಡರ್ ಮೇಜರ್ ಜನರಲ್ ಟೋಮರ್ ಬಾರ್ ಮತ್ತು ಎಫ್-35ಐ ಪೈಲಟ್ ನಡುವಿನ ಸಂಭಾಷಣೆಯನ್ನೂ ಇಸ್ರೇಲ್ ಬಿಡುಗಡೆ ಮಾಡಿದ್ದು, “ಟೆಹರಾನ್ ಆಕಾಶದಲ್ಲಿ ಕಂಡುಬಂದ ಇರಾನ್ ಫೈಟರ್ ಜೆಟ್ ಪತನವು ನಮ್ಮ ವಾಯುಪಡೆಯ ಶಕ್ತಿ ಮತ್ತು ದೃಢಸಂಕಲ್ಪದ ಸಂಕೇತ” ಎಂದು ಐಎಎಫ್ ಮುಖ್ಯಸ್ಥರು ಹೇಳಿದ್ದಾರೆ.

ಇದರ ಜೊತೆಗೆ ಟೆಹರಾನ್‌ನ ಭದ್ರತಾ ಕಮಾಂಡ್ ಕೇಂದ್ರಗಳು ಹಾಗೂ ಪಶ್ಚಿಮ ಇರಾನ್‌ನ ಇಸ್ಫಹಾನ್‌ನಲ್ಲಿ ಇರುವ ಕ್ಷಿಪಣಿ ಸಂಗ್ರಹಾಗಾರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದುದಾಗಿ ತಿಳಿಸಿದೆ. ಭೂಗತ ಬ್ಯಾಲಿಸ್ಟಿಕ್ ಕ್ಷಿಪಣಿ ಸಂಗ್ರಹಣಾ ಸ್ಥಳಗಳು ಹಾಗೂ ಉಡಾವಣಾ ತಾಣಗಳನ್ನು ನಾಶಪಡಿಸಿದ್ದೇವೆ ಎಂದು ಇಸ್ರೇಲ್ ಹೇಳಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ನಗರಗಳ ಮೇಲೆ ದಾಳಿ ಮುಂದುವರಿಸಿದೆ. ಇದೇ ವೇಳೆ ಒಮನ್ ಕೊಲ್ಲಿಯಲ್ಲಿ ನಡೆದ ಇರಾನ್ ದಾಳಿಯಲ್ಲಿ ಮೃತಪಟ್ಟ ಭಾರತೀಯರು ಬಿಹಾರ ಮೂಲದ ಕ್ಯಾಪ್ಟನ್ ಆಶಿಶ್ ಕುಮಾರ್ ಮತ್ತು ರಾಜಸ್ಥಾನದ ದಲೀಪ್ ಸಿಂಗ್ ಎಂದು ಗುರುತಿಸಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-05 16:15:58
No Reviews