ಅನಾರೋಗ್ಯ ಮಹಿಳೆಗೆ ಎಚ್‌ಡಿಕೆ ನೆರವು

ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದ ಅನಾರೋಗ್ಯಪೀಡಿತ ಪೂಜಾ (24) ಅವರನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿ ಸಾಂತ್ವನ ಹೇಳಿ, ತಕ್ಷಣ ಧನಸಹಾಯ ಒದಗಿಸಿದರು. ಜೊತೆಗೆ ವಸತಿ ವ್ಯವಸ್ಥೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಭರವಸೆ ನೀಡಿ ಮಾನವೀಯತೆ ಮೆರೆದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಗಮನಿಸಿದ ಸಚಿವರು ಸ್ವತಃ ಭೇಟಿ ನೀಡಿ ಕುಟುಂಬದ ನೋವು ಆಲಿಸಿದರು. ಸಂಕಷ್ಟದ ವಿಚಾರ ಹಂಚಿದ ಯುವಕ ಚೇತನ್ ಅವರನ್ನು ಶ್ಲಾಘಿಸಿ, ಕುಟುಂಬಕ್ಕೆ ಧೈರ್ಯ ತುಂಬಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-10 17:13:21
No Reviews