ಬುಮ್ರಾ ಬರಗಾಲ? ಹಾರ್ದಿಕ್ ಖಡಕ್ ಉತ್ತರ!

ಸೋಮವಾರ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2026 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಜಸ್‌ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಸಾಯಿ ಸುದರ್ಶನ್ ವಿಕೆಟ್ ಪಡೆದು ತಮ್ಮ ವಿಕೆಟ್ ಖಾತೆ ತೆರೆದು ಮಿಂಚಿದರು. ಬುಮ್ರಾ ಮೊದಲ ಓವರ್ ಬೌಲಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ನಾಯಕ ಹಾರ್ದಿಕ್ ಪಾಂಡ್ಯ, “ಅವರು ತಮ್ಮ ಕರಿಯರ್‌ನಲ್ಲಿ ಬಹಳ ಕಡಿಮೆ ಬಾರಿ ಮೊದಲ ಓವರ್ ಎಸೆದಿದ್ದಾರೆ; ಇದು ನನ್ನ ಸಮಸ್ಯೆಯಲ್ಲ” ಎಂದು ಸ್ಪಷ್ಟಪಡಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗೆ 199 ರನ್‌ ಕಲೆಹಾಕಿದ್ದು, ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಅಜೇಯ 101 ರನ್‌ ಬಾರಿಸಿ ಗೆಲುವಿನ ಹೀರೋ ಆಗಿದರು. ದೊಡ್ಡ ಗುರಿ ಬೆನ್ನಟ್ಟಿದ ಗುಜರಾತ್ ತಂಡ 15.5 ಓವರ್‌ಗಳಲ್ಲಿ 100 ರನ್‌ಗೆ ಕುಸಿದು ಸೋಲನುಭವಿಸಿತು. ಅಶ್ವನಿ ಕುಮಾರ್ 4 ವಿಕೆಟ್ ಪಡೆದು ದಾಳಿ ಮುನ್ನಡೆಸಿದರೆ, ಗಜನ್‌ಫರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಎರಡು ವಿಕೆಟ್‌ ಕಿತ್ತು ಬೆಂಬಲ ನೀಡಿದರು.

ಈ ಗೆಲುವಿನಿಂದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೂರು ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನಕ್ಕೇರಿತು. ಪಂದ್ಯಾನಂತರ ಮಾತನಾಡಿದ ಪಾಂಡ್ಯ, “ಸತತ ಸೋಲಿನ ಬಳಿಕ ಗೆಲ್ಲುವುದು ಸವಾಲು. ಅದೂ ಅಹಮದಾಬಾದ್‌ನಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ. ಆದ್ದರಿಂದ ಈ ಜಯ ತುಂಬಾ ತೃಪ್ತಿಕರ” ಎಂದು ಸಂತಸ ವ್ಯಕ್ತಪಡಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-21 10:45:20
No Reviews