Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ಚಾಮರಾಜನಗರ: ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅರಣ್ಯ ಇಲಾಖೆ ಮತ್ತು ಪ್ರಕರಣದಲ್ಲಿ ಬದುಕುಳಿದ ಮಹಿಮಾ ದಾಸ್ ನೀಡಿರುವ ಹೇಳಿಕೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಹಿಮಾ ದಾಸ್ ಚಿಕಿತ್ಸೆ ಪಡೆದು ನಾಪತ್ತೆಯಾಗಿದ್ದರು. ಇದೀಗ ಅಜ್ಞಾತ ಸ್ಥಳದಿಂದ ಸುಮಾರು 80 ಸೆಕೆಂಡ್‌ಗಳ ವಿಡಿಯೋ ಬಿಡುಗಡೆ ಮಾಡಿರುವ ಅವರು, “ನಾವು ಬೆಟ್ಟದಿಂದ ಇಳಿದ ತಕ್ಷಣ ಅರಣ್ಯಾಧಿಕಾರಿಗಳು ಗುಂಡು ಹಾರಿಸಿದರು” ಎಂದು ಆರೋಪಿಸಿದ್ದಾರೆ. ತನಗೆ ಜೀವ ಭಯವಿದ್ದು, ರಕ್ಷಣೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಬೇಟೆಗಾರರು ಮೊದಲು ಗುಂಡು ಹಾರಿಸಿದ್ದು, ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು ಎನ್ನಲಾಗಿದೆ. ಆದರೆ ಮಹಿಮಾ ದಾಸ್ ಅವರ ವಿಡಿಯೋ ಹೇಳಿಕೆ ಇದಕ್ಕೆ ವಿರುದ್ಧವಾಗಿದೆ.
ದಾಸ್ ಹೇಳುವಂತೆ, ಬೆಳಗ್ಗೆ ಸುಮಾರು 5.30ರ ವೇಳೆಗೆ ನಾಲ್ವರು ಬೆಟ್ಟದಿಂದ ಕೆಳಗಿಳಿದಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದ್ದು, ಭಯಗೊಂಡು ತಾನು ಅಲ್ಲಿಂದ ಓಡಿಹೋದೆ ಎಂದು ಅವರು ತಿಳಿಸಿದ್ದಾರೆ. ಕೆಲ ಸಮಯದ ಬಳಿಕ ಮನೆಗೆ ಮರಳಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.
ಹೀಗಾಗಿ ಮೊದಲು ಗುಂಡು ಹಾರಿಸಿದ್ದು ಯಾರು? ಗುಂಡಿನ ಚಕಮಕಿ ನಿಖರವಾಗಿ ಹೇಗೆ ಆರಂಭವಾಯಿತು? ಎಂಬ ಪ್ರಶ್ನೆಗಳು ಇದೀಗ ಮತ್ತಷ್ಟು ಗಂಭೀರವಾಗಿವೆ.
ಇತ್ತ ಅರಣ್ಯ ಇಲಾಖೆ ಘಟನಾ ಸ್ಥಳದಿಂದ ಬೇಟೆಗಾರರಿಗೆ ಸೇರಿದ ಬಂದೂಕು, ಸುಮಾರು 34.25 ಕೆಜಿ ಜಿಂಕೆ ಮಾಂಸ, ಗುಂಡೇಟಿನ ಗುರುತುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ. ನಾಲ್ಕು ಜೊತೆ ಪ್ಯಾರಗನ್ ಚಪ್ಪಲಿ, ನೀರಿನ ಬಾಟಲಿ ಸೇರಿದಂತೆ ವಿವಿಧ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಆದರೆ ಇವುಗಳಲ್ಲಿ ಹೊಸ ಚಪ್ಪಲಿಯ ಮೇಲಿನ ಸ್ಟಿಕ್ಕರ್ ಕೂಡ ತೆಗೆಯದೇ ಇರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಘಟನಾ ಸ್ಥಳದಲ್ಲಿ ಇಂತಹ ಹೊಸ ಚಪ್ಪಲಿಗಳು ಹೇಗೆ ಬಂದವು? ಅವು ನಿಜವಾಗಿಯೂ ಮೃತರದ್ದೇ? ಅಥವಾ ಘಟನೆಯ ನಂತರ ಯಾರಾದರೂ ಅಲ್ಲಿಗೆ ತಂದಿಟ್ಟರೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಮಹಿಮಾ ದಾಸ್ ಅವರ ವಿಡಿಯೋ ಹೇಳಿಕೆ ಹಾಗೂ ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಸಾಕ್ಷ್ಯಗಳ ನಡುವೆ ಕಂಡುಬರುತ್ತಿರುವ ವ್ಯತ್ಯಾಸಗಳು ಪ್ರಕರಣದ ತನಿಖೆಯನ್ನು ಮತ್ತಷ್ಟು ಮಹತ್ವದ ಹಂತಕ್ಕೆ ಕೊಂಡೊಯ್ದಿವೆ. ಆದರೆ ಯಾರ ಹೇಳಿಕೆ ಸತ್ಯ? ಘಟನಾ ಸ್ಥಳದಲ್ಲಿ ಅಂದು ನಡೆದಿದ್ದೇನು? ಎಂಬುದಕ್ಕೆ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಬೇಕಿದೆ.
ಮೂರು ಜೀವಗಳ ಬಲಿಯಾದ ಈ ಪ್ರಕರಣದಲ್ಲಿ ಪ್ರತಿಯೊಂದು ಸಾಕ್ಷ್ಯವೂ ನಿರ್ಣಾಯಕವಾಗಿರುವುದರಿಂದ, ಘಟನಾ ಸ್ಥಳದ ಪರಿಶೀಲನೆ, ಬ್ಯಾಲಿಸ್ಟಿಕ್ ಸಾಕ್ಷ್ಯ, ಮರಣೋತ್ತರ ಪರೀಕ್ಷೆ ಹಾಗೂ ವಿಡಿಯೋ ಹೇಳಿಕೆಯ ಪರಿಶೀಲನೆ ಸೇರಿದಂತೆ ತನಿಖೆಯ ಪ್ರತಿಯೊಂದು ಹಂತವೂ ಮಹತ್ವ ಪಡೆದಿದೆ.
ಮಹಿಮಾ ದಾಸ್ ಅವರ ವಿಡಿಯೋ ಪ್ರಕರಣಕ್ಕೆ ಹೊಸ ತಿರುವು ನೀಡಿದೆಯೇ? ಅಥವಾ ತನಿಖೆಯ ದಿಕ್ಕನ್ನೇ ಬದಲಿಸುವಂತಹ ಮತ್ತಷ್ಟು ಸಾಕ್ಷ್ಯಗಳು ಹೊರಬರಲಿವೆಯೇ? ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.