Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಹಾಗೂ ನಟಿಯಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಅನುಪಮಾ ಗೌಡ, ತಮ್ಮ 8 ವರ್ಷಗಳ ಆ್ಯಂಕರಿಂಗ್ ಪಯಣಕ್ಕೆ ವಿದಾಯ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ನಿರೂಪಣಾ ವೃತ್ತಿಯಿಂದ ದೂರ ಸರಿಯುತ್ತಿರುವ ನಿರ್ಧಾರದ ಹಿಂದಿನ ಕಾರಣ ಹಾಗೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅನುಪಮಾ ಗೌಡ ಅವರ ನಿರೂಪಣಾ ಪಯಣ 2018ರ ಜೂನ್ 22ರಂದು ಆರಂಭವಾಗಿತ್ತು. 2016ರಲ್ಲೇ ನಿರೂಪಕಿಯಾಗುವ ಅವಕಾಶ ಬಂದಿದ್ದರೂ, ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ವೇದಿಕೆ ಏರಿದ್ದಾಗಿ ಅವರು ತಿಳಿಸಿದ್ದಾರೆ. ಅಲ್ಲಿಂದ ಆರಂಭವಾದ ತಮ್ಮ ಆ್ಯಂಕರಿಂಗ್ ಪಯಣವು 2026ರ ಮೇ 5ರಂದು ಅನಿರೀಕ್ಷಿತವಾಗಿ ಅಂತ್ಯಗೊಂಡಿದೆ ಎಂದು ಅನುಪಮಾ ಹೇಳಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿರುವ ಅನುಪಮಾ, ನಿರೂಪಣೆಯ ಬಗ್ಗೆ ಹೆಚ್ಚಿನ ಅರಿವಿಲ್ಲದಿದ್ದ ತಮ್ಮನ್ನು ಕನ್ನಡ ಮಾತನಾಡಲು, ವೇದಿಕೆ ಮೇಲೆ ಆತ್ಮವಿಶ್ವಾಸದಿಂದ ನಿಲ್ಲಲು ಹಾಗೂ ಉತ್ತಮ ನಿರೂಪಕಿಯಾಗಲು ಹಲವರು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಎಂಟು ವರ್ಷಗಳ ಪಯಣದಲ್ಲಿ ಅನೇಕ ಅತ್ಯುತ್ತಮ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡಿದ್ದು, ಅವರೊಂದಿಗೆ ಬೆಳೆದ ಸಂಬಂಧಗಳನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅಭಿಮಾನಿಗಳು ನೀಡಿದ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆ್ಯಂಕರಿಂಗ್‌ನಿಂದ ದೂರ ಸರಿಯುವ ನಿರ್ಧಾರಕ್ಕೆ ಮುಖ್ಯ ಕಾರಣ ತಮ್ಮೊಳಗಿನ ಕಲಾವಿದೆಗೆ ಇನ್ನಷ್ಟು ಅವಕಾಶ ನೀಡಬೇಕು ಎಂಬ ಬಯಕೆ ಎಂದು ಅನುಪಮಾ ಹೇಳಿದ್ದಾರೆ. “ನಿಮ್ಮಿಂದ ತುಂಬಾ ಕಲಿತಿದ್ದೇನೆ, ತುಂಬಾ ಪ್ರೀತಿ ಕೊಟ್ಟಿದ್ದೀರಿ” ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಅವರು, ಮುಂದಿನ ಜೀವನದಲ್ಲಿ ಬೇರೆ ಬೇರೆ ದಾರಿಗಳಿದ್ದು, ಅವುಗಳತ್ತ ಹೆಜ್ಜೆ ಇಡಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
“ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತದೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ. ನಿಮ್ಮ ಪ್ರೀತಿಗೆ ನಾನು ಚಿರಋಣಿ” ಎಂಬ ಭಾವನಾತ್ಮಕ ಮಾತುಗಳನ್ನು ಅನುಪಮಾ ಹಂಚಿಕೊಂಡಿದ್ದಾರೆ.
ಅನುಪಮಾ ಅವರ ವಿದಾಯದ ಮಾತುಗಳಲ್ಲಿ ಕೆಲವು ಬೇಸರದ ಸಂಗತಿಗಳೂ ವ್ಯಕ್ತವಾಗಿವೆ. ಹೊಸ ಶೋನಲ್ಲಿ ತಾವು ಇರಬೇಕಿತ್ತು, ಆದರೆ ಅಂತಿಮವಾಗಿ ಆ ಅವಕಾಶ ಸಿಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ವಾಹಿನಿಯ ಕಡೆಯಿಂದ ಕೆಲವು ಭರವಸೆಗಳು ದೊರೆತಿದ್ದರೂ ಅವು ಪೂರ್ಣವಾಗಲಿಲ್ಲ ಎಂಬ ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ.
“ನೀವೆಲ್ಲ ‘ಸಾಕಮ್ಮ’ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ” ಎಂಬ ರೀತಿಯಲ್ಲಿ ಮಾತನಾಡಿರುವ ಅನುಪಮಾ, ತಮ್ಮ ನಿರೂಪಣಾ ಪಯಣ ಅಪೂರ್ಣವಾಗಿ ಅಂತ್ಯಗೊಂಡ ಭಾವನೆ ತಮ್ಮಲ್ಲಿದೆ ಎಂಬುದನ್ನು ಸೂಚಿಸಿದ್ದಾರೆ. ಕೊನೆಯ ಕಾರ್ಯಕ್ರಮವನ್ನು ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಗಲಿಲ್ಲ ಎಂಬ ನೋವು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.
ಅನುಪಮಾ ಗೌಡ ಕನ್ನಡ ಕಿರುತೆರೆಯಲ್ಲಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ‘ಮಜಾ ಭಾರತ’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್‌ಸ್ಟಾರ್ಸ್’, ‘ಸುವರ್ಣ ಜಾಕ್‌ಪಾಟ್’, ‘ಗರ್ಲ್ಸ್ vs ಬಾಯ್ಸ್’ ಹಾಗೂ ‘ಕ್ವಾಟ್ಲೆ ಕಿಚನ್’ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಅವರು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.
ನಿರೂಪಣೆಯ ಜೊತೆಗೆ ನಟನೆಯಲ್ಲೂ ಗುರುತಿಸಿಕೊಂಡಿರುವ ಅನುಪಮಾ, ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಲಿದ್ದಾರೆ ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಆ್ಯಂಕರಿಂಗ್‌ಗೆ ವಿದಾಯ ಹೇಳಿದರೂ ಕಲಾವಿದೆಯಾಗಿ ತಮ್ಮ ಪಯಣ ಮುಂದುವರಿಯಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.