ಬೆಂಗಳೂರು ನಿವಾಸಿಗಳೇ ಗಮನಿಸಿ: ಜುಲೈ 21ರಂದು ನಿಗದಿತ ವಿದ್ಯುತ್‌ ಕಡಿತ

ಬೆಂಗಳೂರು ಪವರ್ ಕಟ್: ಜುಲೈ 21ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾ ಪಟ್ಟಿಯಲ್ಲಿದೆಯೇ?

ಬೆಂಗಳೂರು, ಜು.20: ಕೆಪಿಟಿಸಿಎಲ್‌ನ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 21 (ಮಂಗಳವಾರ)ರಂದು ನಗರದ ಹಲವು ಪ್ರದೇಶಗಳಲ್ಲಿ ನಿಗದಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ.

ಹೆಬ್ಬಾಳ 220/66/11 ಕೆ.ವಿ. ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ಸ್ ಕಾಲೋನಿ, ಸಿಬಿಐ ಕ್ವಾರ್ಟರ್ಸ್, ಆರ್‌ಬಿಐ ಕಾಲೋನಿ, ಸಿಪಿಯು ಬ್ಲಾಕ್, ಡಿಜಿಕ್ಯೂ ಕ್ವಾರ್ಟರ್ಸ್, ಮುನಿರಾಮಯ್ಯ ಬ್ಲಾಕ್, ಯುಎಎಸ್ ಕ್ಯಾಂಪಸ್, ದಿನ್ನೂರು ಮುಖ್ಯರಸ್ತೆ, ಆರ್‌ಟಿ ನಗರ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುತ್ತಮುತ್ತ, ಮುನ್ನಪ್ಪ ಕಾಲೋನಿ, ಎಚ್‌ಎಂಟಿ ಬ್ಲಾಕ್, ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ, ಅಶ್ವತ್ ನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ಕುವೆಂಪು ಲೇಔಟ್, ನೇತಾಜಿ ನಗರ, ವಿನಾಯಕ ಲೇಔಟ್, ಸ್ಟೆರ್ಲಿಂಗ್ ಗಾರ್ಡನ್ ಲೇಔಟ್, ಐವಿಆರ್‌ಐ, ಗಂಗಾನಗರ ಮಾರುಕಟ್ಟೆ, ಚೋಳನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದರ ಜೊತೆಗೆ ಎಜಿಎಸ್ ಕಾಲೋನಿ, ಎಸ್‌ಬಿಎಂ ಕಾಲೋನಿ, ವೇಣುಗೋಪಾಲರೆಡ್ಡಿ ಲೇಔಟ್, ಆನಂದಗಿರಿ ಎಕ್ಸ್ಟೆನ್ಷನ್, ಪೊಲೀಸ್ ಕ್ವಾರ್ಟರ್ಸ್, ಹೆಬ್ಬಾಳ ಎಸ್‌ಎಸ್ ಬ್ಲಾಕ್, ಗುಡ್ಡದಹಳ್ಳಿ ರಸ್ತೆ, ಸುಬ್ರಮಣಿ ಕಾಲೋನಿ, ಕುಂಟಿಗ್ರಾಮ, ಕೆಇಬಿ ಲೇಔಟ್, ಸಂಜಯನಗರ, ಎಇಸಿಎಸ್ ಲೇಔಟ್, ಗೆದ್ದಲಹಳ್ಳಿ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, ಕಲ್ಪನಾ ಚಾವ್ಲಾ ರಸ್ತೆ, ಚೋಳನಗರ, ಅಮರಜ್ಯೋತಿ ಲೇಔಟ್, ಗುಂಡಪ್ಪರೆಡ್ಡಿ ಲೇಔಟ್, ಚಿನ್ನಮ್ಮ ಲೇಔಟ್, ಸಿಐಎಲ್ ಲೇಔಟ್, ಸನ್‌ರೈಸ್ ಕಾಲೋನಿ, ಮೈತ್ರಿ ಬಜಾರ್, ಗುಡ್ಡದಹಳ್ಳಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.

ಈ ಪ್ರದೇಶಗಳಲ್ಲೂ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಇರಲ್ಲ

ಫ್ರೆಸ್ಟೀಜ್ ಫಾಲ್ಕನ್ ಸಿಟಿ, ಖೋಡೇಸ್ ಗ್ಲಾಸ್ ಫ್ಯಾಕ್ಟರಿ ಹಾಗೂ ಎಲಿಟ್ ಪ್ರೊಮೆನೇಡ್ ಉಪಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಭಾಗಗಳು ಸೇರಿವೆ

ಪೋರಂ ಮಾಲ್, ಫ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ನಾರಾಯಣನಗರ 3ನೇ ಬ್ಲಾಕ್, ಮುನಿರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜ್ಯೋತಿ ಲೇಔಟ್, ಗಂಗಾಪತಿಪುರ, ಸುಪ್ರಜ ನಗರ, ಜೆಎಸ್‌ಎಸ್ ಶಾಲೆ ಸುತ್ತಮುತ್ತ, ಕೋಣನಕುಂಟೆ ಸರ್ಕಾರಿ ಶಾಲೆ, ಜರಗನಹಳ್ಳಿ ಪಾರ್ಕ್, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಾರ್ಜುನ ಪ್ರೀಮಿಯರ್ ಅಪಾರ್ಟ್‌ಮೆಂಟ್, ಚುಂಚಗಟ್ಟ ಗ್ರಾಮ, ಶ್ರೀನಿಧಿ ಲೇಔಟ್, ಕೋಣನಕುಂಟೆ, ತಲಘಟ್ಟಪುರ, ಆವಲಹಳ್ಳಿ, ಎಲಿಟ್ ಪ್ರೊಮೆನೇಡ್ ಅಪಾರ್ಟ್‌ಮೆಂಟ್, ಕೆ.ಆರ್. ಲೇಔಟ್, ಶಾರದನಗರ, ಚುಂಚಗಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-07-20 16:42:55
No Reviews