ಆನ್‌ಲೈನ್ ಜೂಜಿಗೆ ಬ್ಯಾಂಕ್ ಚಿನ್ನ ಕಳವು!

ಬ್ಯಾಂಕ್ ಚಿನ್ನ ಕಳ್ಳತನ – ಜೂಜಿನ ಚಟಕ್ಕೆ 4 ಕೋಟಿ ದೋಚಿಕೆ

ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಅಡಮಾನ ಇಟ್ಟಿದ್ದ ಗ್ರಾಹಕರ ಚಿನ್ನಾಭರಣವನ್ನು ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕದ್ದಿದ್ದಾನೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಚಟಕ್ಕೆ ಬಿದ್ದು ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನವನ್ನು ದುರ್ಬಳಕೆ ಮಾಡಿದ್ದ ಆರೋಪಿ ಕಿರಣ್ ಅನ್ನು ಪೊಲೀಸರು ಬಂಧಿಸಿದ್ದಾರೆ.


ಶಿವಮೊಗ್ಗದಲ್ಲಿ ಕುಡಿತದ ಅಮಲಿನಲ್ಲಿ ಕ್ರೂರ ಹತ್ಯೆ

ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೇ ಸೇರಿ ತಮ್ಮ ಗೆಳೆಯ ಶ್ರೀನಿವಾಸ್ (36) ಅವರನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮದ್ಯಪಾನ ವೇಳೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ವಿಕೃತ ರೀತಿಯಲ್ಲಿ ಕೊಲೆ ಮಾಡಿದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ಡಬಲ್ ಮರ್ಡರ್ ಶಾಕ್

ಬೆಂಗಳೂರುನಲ್ಲಿ ಹಣಕಾಸು ಸಮಸ್ಯೆಗಾಗಿ ಟೆಕ್ಕಿಯಿಂದಲೇ ತಂದೆ–ತಾಯಿಯ ಹತ್ಯೆ ನಡೆದಿರುವುದು ನಗರವನ್ನು ಬೆಚ್ಚಿಬೀಳಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-14 11:51:41
No Reviews