Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ದೊಡ್ಡ ತಂತ್ರಜ್ಞಾನ ನೆರವಿನ ರೂಪದಲ್ಲಿ ವಾಟ್ಸಪ್ ಹೊಸ ‘ಬಿಸಿನೆಸ್ ಎಐ’ ಸೇವೆಯನ್ನು ಪರಿಚಯಿಸಿದೆ. ವಾಟ್ಸಪ್ ಬಿಸಿನೆಸ್ ಅಪ್ಲಿಕೇಶನ್ನಲ್ಲೇ ಲಭ್ಯವಾಗುವ ಈ ಎಐ ಆಧಾರಿತ ವ್ಯವಸ್ಥೆ, ಗ್ರಾಹಕರೊಂದಿಗೆ 24/7 ಸಂವಹನ ನಡೆಸಲು ನೆರವಾಗಲಿದೆ. ವಿಶೇಷವೆಂದರೆ, ಇದು ಭಾರತದ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ಲಭ್ಯವಿರುವುದರಿಂದ ಸಣ್ಣ ವ್ಯಾಪಾರಸ್ಥರಿಗೆ ಇದು ದೊಡ್ಡ ಸಹಾಯವಾಗಲಿದೆ.
ಗ್ರಾಹಕರ ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಸ್ವಯಂಚಾಲಿತ ಉತ್ತರ ನೀಡುವುದು, ಉತ್ಪನ್ನಗಳ ಮಾಹಿತಿ, ಬೆಲೆ, ರಿಯಾಯಿತಿ, ಶಿಪ್ಪಿಂಗ್ ಹಾಗೂ ಬುಕ್ಕಿಂಗ್ಗಳಿಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ನಿರ್ವಹಿಸುವ ಸಾಮರ್ಥ್ಯ ಈ ಎಐಗೆ ಇದೆ. ಇದರಿಂದ ವ್ಯವಹಾರಗಳು ಹೆಚ್ಚುವರಿ ಸಿಬ್ಬಂದಿ ಅಥವಾ ಬೇರೆ ಸಾಫ್ಟ್ವೇರ್ ಅವಲಂಬಿಸದೇ ತಮ್ಮ ವ್ಯಾಪಾರವನ್ನು ಸುಗಮವಾಗಿ ನಡೆಸಬಹುದು.
ವಾಟ್ಸಪ್ ಬಿಸಿನೆಸ್ ಎಐ ಅನ್ನು ವ್ಯವಹಾರಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳುವ ಅವಕಾಶವೂ ಇದೆ. ಯಾವುದೇ ಕೋಡಿಂಗ್ ಜ್ಞಾನವಿಲ್ಲದೇ ಕೆಲವು ಸರಳ ಹಂತಗಳ ಮೂಲಕ ಇದನ್ನು ಸಕ್ರಿಯಗೊಳಿಸಬಹುದು. ಶೀಘ್ರದಲ್ಲೇ ವಾಟ್ಸಪ್ ಚಾಟ್ನಲ್ಲೇ ಯುಪಿಐ ಮೂಲಕ ನೇರ ಪಾವತಿ ಮಾಡುವ ವ್ಯವಸ್ಥೆಯೂ ಬರಲಿದ್ದು, ಗ್ರಾಹಕರಿಗೆ ಮತ್ತಷ್ಟು ಸುಲಭ ಅನುಭವ ಸಿಗಲಿದೆ.
ಮೆಟಾ ಇಂಡಿಯಾದ ಬಿಸಿನೆಸ್ ಮೆಸೇಜಿಂಗ್ ಡೈರೆಕ್ಟರ್ ರವಿ ಗಾರ್ಗ್ ಮಾತನಾಡಿ, “ಸಣ್ಣ ವ್ಯವಹಾರಗಳು ಭಾರತದ ಆರ್ಥಿಕತೆಯ ಬೆನ್ನೆಲುಬು. ಪ್ರತಿಯೊಂದು ಗ್ರಾಹಕರ ಸಂಭಾಷಣೆಯೂ ಅವರಿಗೆ ಅಮೂಲ್ಯ. ಎಐ ನೆರವಿನಿಂದ ಅವರು ಯಾವುದೇ ಸಮಯದಲ್ಲೂ ಗ್ರಾಹಕರಿಗೆ ಸ್ಪಂದಿಸಿ ವ್ಯಾಪಾರವನ್ನು ಬೆಳೆಯಿಸಬಹುದು,” ಎಂದು ಹೇಳಿದ್ದಾರೆ.
ಈ ಎಐ ಬಳಕೆ ಈಗಾಗಲೇ ಅನೇಕ ಸಣ್ಣ ವ್ಯವಹಾರಗಳಿಗೆ ಉತ್ತಮ ಫಲಿತಾಂಶ ನೀಡುತ್ತಿದೆ. ‘ಸಾಯಿಲ್ ಕಾನ್ಸೆಪ್ಟ್’ ಎಂಬ ಸಸ್ಯಾಧಾರಿತ ವೈಯಕ್ತಿಕ ಆರೈಕೆ ಬ್ರ್ಯಾಂಡ್, 24 ಗಂಟೆಯ ಗ್ರಾಹಕ ಬೆಂಬಲದ ಮೂಲಕ ತನ್ನ ಲೀಡ್ ಪರಿವರ್ತನೆ ಪ್ರಮಾಣವನ್ನು 80-90%ಕ್ಕೆ ಏರಿಸಿಕೊಂಡಿದೆ. ‘ದಿ ಪರ್ಪಲ್ ಸನ್ಸೆಟ್’ ಎಂಬ ಗಿಫ್ಟ್ ವ್ಯವಹಾರವೂ ಎಐ ಬಳಕೆಯಿಂದ ಮಾರಾಟದಲ್ಲಿ 40% ಹೆಚ್ಚಳ ಕಂಡಿದೆ.
ಕಾಂತರ್ ಅಧ್ಯಯನ (2025) ಪ್ರಕಾರ, ಭಾರತದಲ್ಲಿ 91% ಆನ್ಲೈನ್ ಬಳಕೆದಾರರು ವಾರಕ್ಕೊಮ್ಮೆ ಯಾವುದಾದರೂ ವ್ಯವಹಾರದೊಂದಿಗೆ ಚಾಟ್ ಮಾಡುತ್ತಾರೆ. ಈ ಹಿನ್ನೆಲೆ ವಾಟ್ಸಪ್ ಬಿಸಿನೆಸ್ ಎಐ, ಸಣ್ಣ ವ್ಯಾಪಾರಿಗಳಿಗೆ ಹೊಸ ಡಿಜಿಟಲ್ ಕ್ರಾಂತಿಯಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.