ಟ್ರೋಲ್‌ಗಳಿಗೆ ತ್ರಿಷಾ ನೇರ ತಿರುಗೇಟು

ಚೆನ್ನೈನ ಜವಾಹರ್‌ಲಾಲ್ ನೆಹರು ಸ್ಟೇಡಿಯಂನಲ್ಲಿ ಮೇ 10ರಂದು ನಡೆದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಟಿ ತ್ರಿಶಾ ಕೃಷ್ಣನ್ ಸಖತ್‌ ಹೈಲೈಟ್‌ ಆಗಿದ್ದರು. ಅವರ ಉಪಸ್ಥಿತಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗಳು ಕೂಡ ನಡೆದಿದ್ದವು.

ಇದೀಗ ತ್ರಿಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ “ಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆ” (Love is always louder) ಎಂದು ಬರೆಯುವ ಮೂಲಕ, ಪರೋಕ್ಷವಾಗಿ ಟ್ರೋಲ್‌ಗಳಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಅವರು ಸಮಾರಂಭದ ಕೆಲವು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಈ ನಡುವೆ ವಿಜಯ್ ಮತ್ತು ತ್ರಿಶಾ ನಡುವಿನ ಸಂಬಂಧದ ಬಗ್ಗೆ ನಡೆಯುತ್ತಿರುವ ವದಂತಿಗಳು ಹಾಗೂ ವಿಜಯ್–ಸಂಗೀತಾ ವಿಚ್ಛೇದನ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿವೆ. ಸಮಾರಂಭದಲ್ಲಿ ವಿಜಯ್ ಅವರ ಪೋಷಕರು ಹಾಜರಾಗಿದ್ದರೆ, ಪತ್ನಿ ಸಂಗೀತಾ ಮತ್ತು ಮಕ್ಕಳು ಗೈರಾಗಿದ್ದರು ಎಂಬುದನ್ನೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಸಾಂಪ್ರದಾಯಿಕ ನೀಲಿ ಕಂಚೀಪುರಂ ಸೀರೆಯಲ್ಲಿ ಮಿಂಚಿದ ತ್ರಿಶಾ ಅವರ ಸ್ಟೈಲ್ ಕೂಡ ಗಮನ ಸೆಳೆದಿದ್ದು, ಚೋಕರ್ ಮತ್ತು ಹೂಮಾಲೆಯೊಂದಿಗೆ ಅವರ ಲುಕ್ ಸಮಾರಂಭದ ಮತ್ತೊಂದು ಹೈಲೈಟ್ ಆಗಿತ್ತು.

ಒಟ್ಟಾರೆ, ರಾಜಕೀಯ ಗೆಲುವಿನ ಸಂಭ್ರಮದ ನಡುವೆ ತ್ರಿಶಾ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕುತೂಹಲವನ್ನು ಹುಟ್ಟಿಸಿವೆ.

 

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-11 14:26:19
No Reviews