ವಾಹನ ಚಾಲಕರಿಗೆ ಶಾಕ್: ಟೋಲ್ ದರ ಹೆಚ್ಚಳ, ಕ್ಯಾಸಿಲ್ಲ ಪಾವತಿ

Yearly Toll Pass: ರಾಷ್ಟ್ರೀಯ ಹೆದ್ದಾರಿಗಳಲ್ಲಿ ₹3,075ಕ್ಕೆ ವರ್ಷವಿಡೀ ಸಂಚಾರಿ

ನವದೆಹಲಿ, ಮಾ.14: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರತಿ ವರ್ಷದಂತೆ ಈ ವರ್ಷವೂ ಟೋಲ್ ದರಗಳನ್ನು ಪರಿಷ್ಕರಿಸುತ್ತಿದ್ದು, ಏಪ್ರಿಲ್ 1, 2026ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಹಣದುಬ್ಬರ ಹಾಗೂ ಸಗಟು ಬೆಲೆ ಸೂಚ್ಯಂಕ (WPI) ಆಧಾರದ ಮೇಲೆ ಈ ಹೆಚ್ಚಳ ಮಾಡಲಾಗುತ್ತಿದೆ.


 ಟೋಲ್ ವಾರ್ಷಿಕ ಪಾಸ್ ದರ ಏರಿಕೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿದಿನ ಸಂಚರಿಸುವ ವಾಹನ ಸವಾರರಿಗೆ ನೀಡಲಾಗುವ ವಾರ್ಷಿಕ ಟೋಲ್ ಪಾಸ್ ದರದಲ್ಲಿ ಹೆಚ್ಚಳ ಮಾಡಲಾಗಿದೆ.

ಹಳೆಯ ದರ: ₹3,000

ಹೊಸ ದರ: ₹3,075

 ನಿಯಮ:
ಈ ಪಾಸ್ ಒಂದು ವರ್ಷ ಅಥವಾ ಗರಿಷ್ಠ 200 ಟೋಲ್ ಕ್ರಾಸ್‌ಗಳಿಗೆ ಮಾತ್ರ ಮಾನ್ಯ.
ಈ ಎರಡರಲ್ಲಿ ಯಾವುದು ಮೊದಲು ಪೂರ್ಣಗೊಳ್ಳುತ್ತದೆಯೋ, ಅಲ್ಲಿಯೇ ಪಾಸ್ ಅವಧಿ ಮುಕ್ತಾಯವಾಗುತ್ತದೆ.


 ಕರ್ನಾಟಕದ 66 ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ

ರಾಜ್ಯದ ಸುಮಾರು 66 ಟೋಲ್ ಪ್ಲಾಜಾಗಳಲ್ಲಿ ಶೇ.3ರಿಂದ 5% ರಷ್ಟು ದರ ಹೆಚ್ಚಳ ಸಾಧ್ಯತೆ ಇದೆ.
ಮುಖ್ಯವಾಗಿ ವಿಮಾನ ನಿಲ್ದಾಣ ರಸ್ತೆ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಮಾರ್ಗದಲ್ಲಿ ಸಂಚಾರ ಸ್ವಲ್ಪ ದುಬಾರಿಯಾಗಲಿದೆ.

ಉದಾಹರಣೆ – ಸಾದಹಳ್ಳಿ ಟೋಲ್ (ವಿಮಾನ ನಿಲ್ದಾಣ ರಸ್ತೆ):

ವಾಹನ ಹಳೆಯ ದರ ಹೊಸ ದರ
ಕಾರು / ಜೀಪ್ / ವ್ಯಾನ್ ₹115 ₹120
ಲಘು ವಾಣಿಜ್ಯ ವಾಹನ ₹175 ₹185
ಬಸ್ / ಟ್ರಕ್ ₹355 ₹370

 ಹೊಸ ನಿಯಮಗಳು ಮತ್ತು ಬದಲಾವಣೆಗಳು

 ನಗದು ಪಾವತಿ ರದ್ದು
ಏಪ್ರಿಲ್ 1 2026ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ವ್ಯವಹಾರ ಸಂಪೂರ್ಣ ರದ್ದು ಮಾಡುವ ಪ್ರಸ್ತಾಪವಿದ್ದು FASTag ಮತ್ತು UPI ಮೂಲಕ ಮಾತ್ರ ಪಾವತಿ ಮಾಡಲು ಅವಕಾಶ ನೀಡಲಾಗಬಹುದು.

 GPS ಆಧಾರಿತ ಟೋಲ್ GNSS
ಕೆಲವು ಆಯ್ದ ಹೆದ್ದಾರಿಗಳಲ್ಲಿ ‘Pay As You Use’ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ವಾಹನ ಓಡಿಸಿದ ದೂರಕ್ಕೆ ಅನುಗುಣವಾಗಿ ಟೋಲ್ ಕಡಿತವಾಗುವ ವ್ಯವಸ್ಥೆ ಇದಾಗಿರುತ್ತದೆ.

 KYC ಕಡ್ಡಾಯ
ಫಾಸ್ಟ್ಯಾಗ್ ಬ್ಲಾಕ್‌ಲಿಸ್ಟ್ ಆಗದಂತೆ FASTag KYC ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.


ಒಟ್ಟಾರೆ ಏಪ್ರಿಲ್‌ನಿಂದ ಟೋಲ್ ದರ ಸ್ವಲ್ಪ ಏರಿಕೆಯಾಗಲಿದ್ದು, ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವತ್ತ ಕೇಂದ್ರ ಸರ್ಕಾರ ಹೆಜ್ಜೆ ಇಡುತ್ತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-14 09:52:08
No Reviews