ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಕುಸಿತ!

ಕಳೆದ ಒಂದು ತಿಂಗಳಿಂದ ನಿರಂತರ ಏರಿಕೆಯಲ್ಲಿ ಇದ್ದ ಚಿನ್ನದ ದರದಲ್ಲಿ ಇಂದು (ಜನವರಿ 31, 2026) ಭರ್ಜರಿ ಕುಸಿತ ಕಂಡು ಬಂದಿದೆ. ಇದರಿಂದಾಗಿ ಆಭರಣ ಗ್ರಾಹಕರ ಮುಖದಲ್ಲಿ ನಗು ಮೂಡಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹790 ಇಳಿಕೆಯಾಗಿ ₹14,720ಕ್ಕೆ ತಲುಪಿದೆ. ಇನ್ನು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹862 ಇಳಿಕೆಯಾಗಿ ₹16,058 ಆಗಿದೆ.


ಬೆಂಗಳೂರುನಲ್ಲಿ ಚಿನ್ನದ ಇಂದಿನ ದರ (31 ಜನವರಿ 2026)

22 ಕ್ಯಾರಟ್ ಚಿನ್ನ

  • 1 ಗ್ರಾಂ: ₹14,720

  • 8 ಗ್ರಾಂ: ₹1,17,760

  • 10 ಗ್ರಾಂ: ₹1,47,200

  • 100 ಗ್ರಾಂ: ₹14,72,000

24 ಕ್ಯಾರಟ್ ಚಿನ್ನ

  • 1 ಗ್ರಾಂ: ₹16,058

  • 8 ಗ್ರಾಂ: ₹1,28,464

  • 10 ಗ್ರಾಂ: ₹1,60,580

  • 100 ಗ್ರಾಂ: ₹16,05,800


ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)

ನಗರ 22 ಕ್ಯಾರಟ್ 24 ಕ್ಯಾರಟ್
ಚೆನ್ನೈ ₹14,900 ₹16,255
ಮುಂಬೈ ₹14,720 ₹16,058
ದೆಹಲಿ ₹14,735 ₹16,073
ಕೋಲ್ಕತ್ತಾ ₹14,720 ₹16,058
ಹೈದರಾಬಾದ್ ₹14,720 ₹16,058

ಬೆಳ್ಳಿಯ ದರದಲ್ಲೂ ಇಳಿಕೆ

ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲಿಯೂ ಇಂದು ಭಾರಿ ಕುಸಿತ ದಾಖಲಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹45 ಇಳಿಕೆಯಾಗಿ ₹350ಕ್ಕೆ ತಲುಪಿದೆ.

ಬೆಳ್ಳಿ ದರ

  • 1 ಗ್ರಾಂ: ₹350

  • 10 ಗ್ರಾಂ: ₹3,500

  • 1 ಕೆಜಿ: ₹3,50,000


ಚಿನ್ನ–ಬೆಳ್ಳಿಯ ದರದಲ್ಲಿ ಕಂಡುಬಂದ ಈ ಇಳಿಕೆ, ಮದುವೆ ಹಾಗೂ ಹಬ್ಬಗಳ ಖರೀದಿಗೆ ಗ್ರಾಹಕರಿಗೆ ದೊಡ್ಡ ನೆಮ್ಮದಿ ತಂದಿದೆ. ಮುಂದಿನ ದಿನಗಳಲ್ಲಿ ದರ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಮೇಲೆ ಮಾರುಕಟ್ಟೆ ಕಣ್ಣಿಟ್ಟಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-31 14:04:39
No Reviews