ಏಳು ವರ್ಷಗಳಾದರೂ ಸೆಟ್ಟೇರದ ಕೈದಿ 2,ಕಾರ್ತಿ ಕೊಟ್ಟ ಸ್ಪಷ್ಟನೆ ಏನು?

ಕಾರ್ತಿ ಅಭಿನಯದ ಡಿಲ್ಲಿ ಪಾತ್ರ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಗಾಢವಾಗಿ ಉಳಿದಿದೆ. ಡ್ರಗ್ಸ್ ಮಾಫಿಯಾ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ನಿರ್ದೇಶಿಸಿದ್ದವರು ಲೋಕೇಶ್ ಕನಗರಾಜ್. ಸಿನಿಮಾ ಯಶಸ್ಸಿನ ಬಳಿಕವೇ ‘ಕೈದಿ 2’ ಮಾಡುವ ಘೋಷಣೆಯೂ ಆಗಿತ್ತು.

ಆದರೆ, ‘ಕೈದಿ’ ಬಿಡುಗಡೆಯಾಗಿ ಈಗಾಗಲೇ ಏಳು ವರ್ಷಗಳು ಕಳೆದರೂ ಸೀಕ್ವೆಲ್ ಇನ್ನೂ ಸೆಟ್ಟೇರಿಲ್ಲ. ಇದಕ್ಕೆ ಪ್ರಮುಖ ಕಾರಣವಾಗಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಭಾರೀ ಸಂಭಾವನೆ ಬೇಡಿಕೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ‘ಕೈದಿ 2’ ನಿರ್ದೇಶನಕ್ಕೆ ಅವರು ಸುಮಾರು 75 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ. ಇಷ್ಟು ದೊಡ್ಡ ಮೊತ್ತ ನಿರ್ಮಾಪಕರಿಗೆ ಭಾರೀ ಹೊರೆ ಆಗಿದ್ದು, ಅದರಿಂದಲೇ ಚಿತ್ರ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ.

‘ಕೈದಿ’ ನಂತರ ಲೋಕೇಶ್ ಅವರು ‘ಮಾಸ್ಟರ್’, ‘ವಿಕ್ರಮ್’, ‘ಲಿಯೋ’ ಹಾಗೂ ‘ಕೂಲಿ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ವಿಕ್ರಮ್’ ಹೊರತುಪಡಿಸಿ ಉಳಿದ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಇತ್ತೀಚಿನ ಬಾಕ್ಸ್ ಆಫೀಸ್ ಪ್ರದರ್ಶನವೂ ನಿರ್ಮಾಪಕರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ, ಇಷ್ಟು ದೊಡ್ಡ ಬಜೆಟ್ ಹೂಡುವುದರಲ್ಲಿ ಅವರು ಹಿಂಜರಿಕೆ ತೋರಿಸುತ್ತಿದ್ದಾರೆ.

ಈ ನಡುವೆ ಲೋಕೇಶ್ ಅವರು ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ ಘೋಷಿಸಿರುವುದು ಕೂಡ ‘ಕೈದಿ 2’ ಮತ್ತಷ್ಟು ಹಿಂದಕ್ಕೆ ಹೋಗಲು ಕಾರಣವಾಗಿದೆ. ಎಲ್ಲವೂ ಯೋಜನೆಯಂತೆ ನಡೆದಿದ್ದರೆ ‘ಕೈದಿ 2’ ಈಗಾಗಲೇ ಫ್ಲೋರ್‌ಗೆ ಬರಬೇಕಿತ್ತು. ಆದರೆ, ನಿರ್ದೇಶಕನ ಹೆಚ್ಚಾದ ಬೇಡಿಕೆ ಹಾಗೂ ಬಜೆಟ್ ಕುರಿತ ಆತಂಕದಿಂದಾಗಿ, ಸದ್ಯಕ್ಕೆ ಈ ಸಿನಿಮಾ ಸ್ಥಗಿತಗೊಂಡಿರುವಂತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-20 10:16:39
No Reviews