ಫೋಟೋಗೆ 100 ರೂ!? ನಿಜವೇ ಈ ಸ್ಟೋರಿ?

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನ 15 ವರ್ಷದ ಯುವ ಸ್ಟಾರ್ ವೈಭವ್ ಸೂರ್ಯವಂಶಿ ತನ್ನ ಸ್ಪೋಟಕ ಬ್ಯಾಟಿಂಗ್ ಮೂಲಕ ನಿರಂತರವಾಗಿ ಟ್ರೆಂಡ್‌ನಲ್ಲಿದ್ದಾರೆ. ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 36 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಮೂರನೇ ವೇಗದ ಶತಕದ ದಾಖಲೆ ನಿರ್ಮಿಸಿದ್ದರು.

ಈ ನಡುವೆ, ಅವರು ವಿಮಾನ ನಿಲ್ದಾಣದಲ್ಲಿ ಇಬ್ಬರು ಪುಟಾಣಿ ಅಭಿಮಾನಿಗಳ ಜೊತೆ ಮಾಡಿದ ಹಾಸ್ಯಭರಿತ ಫ್ರಾಂಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ಒಂದು ಫೋಟೋಗೆ 100 ರೂ ತೆಗೆದುಕೊಳ್ಳುತ್ತೇನೆ” ಎಂದು ಅವರು ಕಾಲೆಳೆದರೂ, ಅಂತಿಮವಾಗಿ ಅದು ಕೇವಲ ಫನ್ ಕ್ಷಣವಾಗಿದ್ದು, ಮಕ್ಕಳಿಂದ ಹಣ ಪಡೆಯದೇ ಎಲ್ಲರೂ ಸಂತೋಷದಿಂದಲೇ ಆ ಕ್ಷಣವನ್ನು ಹಂಚಿಕೊಂಡಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-27 18:56:38
No Reviews