7 ವಿದ್ಯಾರ್ಥಿಗಳಿಂದ ಔಟ್ ಆಫ್ ಔಟ್ ಸಾಧನೆ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಹಲವು ದಾಖಲೆಗಳನ್ನು ದಾಖಲಿಸಿದೆ. ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ದಾವಣಗೆರೆಯ ಭರತ್‌, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿಯ ಪ್ರೀತಂ, ವಿಜಯಪುರದ ಸೌಜನ್ಯ ಮತ್ತು ಬೆಂಗಳೂರು ಉತ್ತರದ ಧನುಷ್ ಈ ಸಾಧನೆ ಮಾಡಿದ್ದಾರೆ.

ಜಿಲ್ಲಾ ಮಟ್ಟದ ಸಾಧನೆಯಲ್ಲಿ ದಕ್ಷಿಣ ಕನ್ನಡ (98.4%), ಉಡುಪಿ (98.18%), ಉತ್ತರ ಕನ್ನಡ (98.02%), ಹಾಸನ (97.51%) ಮತ್ತು ಮಂಡ್ಯ (97.4%) ಟಾಪ್ 5 ಸ್ಥಾನ ಪಡೆದಿವೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.91 ಫಲಿತಾಂಶದೊಂದಿಗೆ ಪ್ರಗತಿ ಕಂಡಿದ್ದು, ಗ್ರಾಮೀಣ ಭಾಗದಲ್ಲಿ ಶೇ.92 ಫಲಿತಾಂಶ ದಾಖಲಾಗಿ ನಗರಕ್ಕಿಂತ ಉತ್ತಮ ಸಾಧನೆ ಕಂಡಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅಂಕಪಟ್ಟಿ ಈ ಬಾರಿ ಮೊದಲ ಬಾರಿಗೆ ಡಿಜಿಲಾಕರ್‌ನಲ್ಲಿ ಲಭ್ಯವಾಗಿದ್ದು, ಫಲಿತಾಂಶವನ್ನು ವೆಬ್‌ಸೈಟ್, ಆಪ್ ಹಾಗೂ ಎಸ್‌ಎಂಎಸ್ ಮೂಲಕವೂ ಪಡೆಯಬಹುದು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-23 16:52:05
No Reviews