ಶೋಯೆಬ್ ಮಲಿಕ್ ದಾಖಲೆ ಮುರಿದ ಪಾಂಡ್ಯ

ಟಿ20 ವಿಶ್ವಕಪ್‌ನಲ್ಲಿ ಐದನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ನಾಲ್ಕು ಅರ್ಧಶತಕ ಗಳಿಸಿದ ಮೊದಲ ಆಟಗಾರ ಎಂಬ ಅಪೂರ್ವ ಹೆಗ್ಗಳಿಕೆಗೆ ಹಾರ್ದಿಕ್ ಪಾಂಡ್ಯ ಪಾತ್ರರಾಗಿದ್ದಾರೆ. ನಮೀಬಿಯಾ ವಿರುದ್ಧ ಈ ಮೈಲಿಗಲ್ಲು ತಲುಪಿದ ಅವರು, 2024ರಲ್ಲಿ ಎರಡು ಹಾಗೂ 2022ರಲ್ಲಿ ಒಂದು ಅರ್ಧಶತಕ ಬಾರಿಸಿ ಒಟ್ಟು ನಾಲ್ಕು ಫಿಫ್ಟಿ ಗಳಿಸಿದ್ದಾರೆ. ಪಾಕಿಸ್ತಾನದ ಶೋಯೆಬ್ ಮಲಿಕ್ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ತಲಾ ಮೂರು ಅರ್ಧಶತಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ಅರ್ಧಶತಕ (ಕ್ರಮಾಂಕ 5 ಅಥವಾ ಕೆಳಗೆ):
• ಹಾರ್ದಿಕ್ ಪಾಂಡ್ಯ – 4
• ಡೇವಿಡ್ ಮಿಲ್ಲರ್ – 3
• ಶೋಯೆಬ್ ಮಲಿಕ್ – 3
• ಮಾರ್ಕಸ್ ಸ್ಟೊಯಿನಿಸ್ – 3
• ಹ್ಯಾರಿ ಬ್ರೂಕ್ – 2
• ಜೆಪಿ ಡುಮಿನಿ – 2

ಜಿಂಬಾಬ್ವೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್‌ಗೆ ಭರ್ಜರಿ 256 ರನ್ ಕಲೆಹಾಕಿ ವಿಶ್ವಕಪ್‌ನಲ್ಲಿ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು. ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಕೊನೆಯವರೆಗೂ ಹೋರಾಟ ತೋರಿದರೂ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 184 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಭಾರತದ ಪರ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರೆ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಕಬಳಿಸಿದರು. ಶಿವಂ ದುಬೆ ದುಬಾರಿ ಎನಿಸಿದರು.

ಇದೀಗ ಸೂಪರ್ ಎಂಟರ್ ‘ಎ’ ಗುಂಪಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮಾರ್ಚ್ 1ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ, ಹಾಲಿ ರನ್‌ರೇಟ್ ಆಧಾರದ ಮೇಲೆ ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-27 15:28:41
No Reviews