ರಿಷಬ್ ಶೆಟ್ಟಿ–ಪ್ರಗತಿ ಶೆಟ್ಟಿ ದಾಂಪತ್ಯಕ್ಕೆ 9 ವರ್ಷ

2017ರ ಫೆಬ್ರವರಿ 9ರಂದು ವಿವಾಹವಾಗಿದ್ದ ಈ ಜೋಡಿ ಇಂದು ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ.

ಈ ವಿಶೇಷ ದಿನದ ಅಂಗವಾಗಿ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿಯೊಂದಿಗೆ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಹೃದಯಸ್ಪರ್ಶಿ ಮಾತುಗಳ ಮೂಲಕ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.
ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ… ಕೊನೆಯಾಗದ ಒಲವಿದೆ” ಎಂದು ಅವರು ತಮ್ಮ ಭಾವನೆಗಳನ್ನು ಮನಮುಟ್ಟುವಂತೆ ವ್ಯಕ್ತಪಡಿಸಿದ್ದಾರೆ.

ಪ್ರಗತಿ ಶೆಟ್ಟಿಯ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಸಿಹಿ ನೆನಪುಗಳಾಗಿ ಉಳಿದಿವೆ ಎಂದು ಹೇಳಿರುವ ರಿಷಬ್, ನಲಿವು, ನೋವು, ನಗು, ಸರಸ–ವಿರಸಗಳ ನಡುವೆಯೂ ಸಮರಸವೇ ದಾಂಪತ್ಯದ ಶಕ್ತಿ ಎಂದು ಬರೆದಿದ್ದಾರೆ. ಆ ಒಲವು ನೀಡಿದ ಬೆಳಕು ಮತ್ತು ಆತ್ಮವಿಶ್ವಾಸವೇ ಇಂದು ತಮಗೇ ತಮ್ಮನ್ನು ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ.

ಕುಂದಾಪುರ ಸಮೀಪದ ಕೋಟೇಶ್ವರದಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ, ತಮ್ಮ ಹುಟ್ಟೂರಲ್ಲಿಯೇ ರಿಷಬ್ ಶೆಟ್ಟಿ ಅವರು ಪ್ರಗತಿಗೆ ತಾಳಿ ಕಟ್ಟಿದ್ದರು. ಇಂದು ಆ ನೆನಪುಗಳೊಂದಿಗೆ ಈ ದಂಪತಿ ತಮ್ಮ ಒಂಬತ್ತನೇ ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-09 19:23:49
No Reviews