ಪುಸ್ತಕ ಲೋಕಾರ್ಪಣೆ ವೇಳೆ ರಾಜೇಂದ್ರಕುಮಾರ್ ಸಾಧನೆಗೆ ಮೆಚ್ಚುಗೆ

ಡಾ. ಪಿ.ವೈ. ರಾಜೇಂದ್ರಕುಮಾರ್ ಅವರ ‘ಗ್ರಾಮೀಣ ಜ್ಞಾನ ಸಮುಚ್ಚಯಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು (ಮಾ.3): ನಾನು ಸಚಿವನಾಗಿದ್ದ ವೇಳೆ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನಿರಂತರವಾಗಿ ಖರೀದಿಸುವ ಬಲವಾದ ವ್ಯವಸ್ಥೆಗೆ ನಿವೃತ್ತ ನಿರ್ದೇಶಕ ಪಿ.ವೈ. ರಾಜೇಂದ್ರಕುಮಾರ್ ಅವರು ಭದ್ರ ಬುನಾದಿ ಹಾಕಿದ್ದರು. ಇದರಿಂದ ಲೇಖಕರಿಗೂ ಸೂಕ್ತ ಪ್ರೋತ್ಸಾಹ ದೊರಕುತ್ತಿತ್ತು. ಆದರೆ ಈಗ ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಆತಂಕದ ಸಂಗತಿ. ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ, ಪುಸ್ತಕ ಖರೀದಿಗೆ ಅಗತ್ಯ ಸೂಚನೆ ನೀಡುವೆ ಎಂದು ಬಸವರಾಜ ಹೊರಟ್ಟಿ ಭರವಸೆ ನೀಡಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-03 19:04:36
No Reviews