ವಾಹನ ಸವಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್

ಸ್ವಚ್ಛ ಇಂಧನ ಬಳಕೆಗೆ ಮತ್ತಷ್ಟು ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಸರ್ಕಾರ E22, E25, E27 ಹಾಗೂ E30 ಇಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣ ರದ್ದುಗೊಳಿಸಿದೆ.

ಈ ನಿರ್ಧಾರದಿಂದ ಜೈವಿಕ ಇಂಧನ ಬಳಕೆ ಹೆಚ್ಚುವುದರ ಜೊತೆಗೆ, ವಿದೇಶಿ ಕಚ್ಚಾತೈಲ ಆಮದು ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ಸ್ನೇಹಿ ಇಂಧನ ಬಳಕೆಗೆ ಉತ್ತೇಜನ ಸಿಗಲಿದ್ದು, ದೇಶದ ಹಸಿರು ಇಂಧನ ಕ್ರಾಂತಿಗೆ ಹೊಸ ಬಲ ದೊರೆಯಲಿದೆ.

ಕಬ್ಬು, ಜೋಳ ಸೇರಿದಂತೆ ಕೃಷಿ ಉತ್ಪನ್ನಗಳಿಂದ ಉತ್ಪಾದನೆಯಾಗುವ ಇಥನಾಲ್‌ಗೆ ಬೇಡಿಕೆ ಹೆಚ್ಚುವ ಮೂಲಕ ರೈತರಿಗೆ ಹೊಸ ಮಾರುಕಟ್ಟೆ ಸಿಗಲಿದ್ದು, ಕೃಷಿ ಕ್ಷೇತ್ರದ ಆದಾಯ ವೃದ್ಧಿಗೂ ಈ ಕ್ರಮ ನೆರವಾಗಲಿದೆ.

ಇಂಧನ ಸ್ವಾವಲಂಬನೆ, ಪರಿಸರ ಸಂರಕ್ಷಣೆ ಮತ್ತು ರೈತರ ಸಬಲೀಕರಣ ಎಂಬ ಮೂರು ಪ್ರಮುಖ ಗುರಿಗಳನ್ನು ಒಂದೇ ವೇಳೆ ಸಾಧಿಸುವತ್ತ ಕೇಂದ್ರ ಸರ್ಕಾರದ ಈ ನಿರ್ಧಾರ ಮಹತ್ವದ ಮೈಲಿಗಲ್ಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-11 12:01:50
No Reviews