ಹೊರ್ಮುಜ್ ಬಳಿ 18 ಭಾರತೀಯ ಹಡಗುಗಳು ಸ್ಥಗಿತ

ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಇಂಧನ ಸಾಗಣೆಗೂ ಸವಾಲು ಎದುರಾಗಿದೆ. ಬಂದರು ಮತ್ತು ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರ ಪ್ರಕಾರ, ಸ್ಥಗಿತಗೊಂಡಿರುವ ಹಡಗುಗಳಲ್ಲಿ ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಕಚ್ಚಾ ತೈಲ ಟ್ಯಾಂಕರ್‌ಗಳು ಸೇರಿವೆ. ಈ ಪ್ರದೇಶದಲ್ಲಿರುವ 18 ಭಾರತೀಯ ಹಡಗುಗಳಲ್ಲಿ ಒಟ್ಟು 485 ಭಾರತೀಯ ನಾವಿಕರು ಇದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಯ ನಂತರ ಸಂಘರ್ಷ ತೀವ್ರಗೊಂಡಿದ್ದು, ಹಡಗು ವಿಮೆ ಪ್ರೀಮಿಯಂ ದರಗಳು ಶೇ. 0.04ರಿಂದ ಶೇ. 0.7ರವರೆಗೆ ಏರಿಕೆಯಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-31 19:21:49
No Reviews