ಪ್ರಜಾಪ್ರಭುತ್ವ ಮತ್ತು ಗ್ರಾಮ ಪಂಚಾಯಿತಿಗಳಿಗೆ ಧಕ್ಕೆ!

ಬಿ ಜಿ ರಾಮ್ ಜಿ ಕಾಯ್ದೆ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಪ್ರಿಯಾಂಕ್ ಖರ್ಗೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಬಿ ಜಿ ರಾಮ್ ಜಿ ಕಾಯ್ದೆ’ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. ಈ ಕಾಯ್ದೆಯು ಗ್ರಾಮೀಣ ಜನರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳಲಿದೆ ಎಂದು ಅವರು ಎಚ್ಚರಿಸಿದರು.


ರಾಜ್ಯಗಳ ಮೇಲಿನ ಆರ್ಥಿಕ ಹಾಗೂ ತೆರಿಗೆ ಭಯೋತ್ಪಾದನೆ

ವಿಧಾನಸಭೆಯಲ್ಲಿ ಸರ್ಕಾರದ ನಿರ್ಣಯವನ್ನು ಸಮರ್ಥಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ,

“ಈ ಕಾಯ್ದೆ ರಾಜ್ಯಗಳ ಮೇಲಿನ ಆರ್ಥಿಕ ಭಯೋತ್ಪಾದನೆ ಹಾಗೂ ತೆರಿಗೆ ಭಯೋತ್ಪಾದನೆಯ ಸಂಚು”

ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಕ್ಷಣವೇ ಹಿಂಪಡೆದು, ಮನರೇಗಾ ಕಾಯ್ದೆಯನ್ನು ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.


ಪ್ರಜಾಪ್ರಭುತ್ವ ಮತ್ತು ಗ್ರಾಮ ಪಂಚಾಯಿತಿಗಳಿಗೆ ಧಕ್ಕೆ

ವಿರೋಧ ಪಕ್ಷಗಳ ಧರಣಿ ಹಾಗೂ ತೀವ್ರ ಗದ್ದಲದ ನಡುವೆ ಮಾತನಾಡಿದ ಅವರು, ಈ ಕಾಯ್ದೆಯಿಂದ

  • ಪ್ರಜಾಪ್ರಭುತ್ವಕ್ಕೆ ಧಕ್ಕೆ,

  • ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕು,

  • ಗ್ರಾಮೀಣ ಉದ್ಯೋಗ ಹಕ್ಕಿಗೆ ಧಕ್ಕೆ

ಉಂಟಾಗಲಿದೆ ಎಂದು ಸದನದ ಗಮನ ಸೆಳೆದರು.


ದುರ್ಬಲ ವರ್ಗಗಳ ಉದ್ಯೋಗ ಹಕ್ಕು ಕಸಿತ: ಖರ್ಗೆ

ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಉದ್ಯೋಗ ಹಕ್ಕು ಕಸಿದುಕೊಳ್ಳಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.


ಕಾಯ್ದೆ ಹಿಂಪಡೆಯದಿದ್ದರೆ ಜನಪರ ಹೋರಾಟ

“ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯದಿದ್ದರೆ, ಕೃಷಿ ಕಾಯ್ದೆಗಳ ವಿರೋಧಿ ಹೋರಾಟದ ಮಾದರಿಯಲ್ಲಿ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಮನರೇಗಾ ಕಾಯ್ದೆ ಪುನರ್ ಸ್ಥಾಪನೆವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ”

ಎಂದು ಸಚಿವರು ಎಚ್ಚರಿಕೆ ನೀಡಿದರು.


ಮನರೇಗಾ ಜಗತ್ತಿನ ಅತಿದೊಡ್ಡ ಹಕ್ಕು ಆಧಾರಿತ ಯೋಜನೆ

ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆ, ಗ್ರಾಮೀಣ ಜನರಿಗೆ ಉದ್ಯೋಗದ ಹಕ್ಕು ನೀಡುವ ಜೊತೆಗೆ ಘನತೆಯಿಂದ ಬದುಕುವ ಭರವಸೆ ನೀಡಿತ್ತು ಎಂದು ಖರ್ಗೆ ಹೇಳಿದರು. ಈ ಯೋಜನೆ ಜಗತ್ತಿನ ಅತಿದೊಡ್ಡ ಹಕ್ಕು ಆಧಾರಿತ ಯೋಜನೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು ಎಂದು ಅವರು ನೆನಪಿಸಿದರು.


ಪ್ರಧಾನಿ ಮೋದಿಯವರೇ ‘ನ್ಯಾಷನಲ್ ಪ್ರೈಡ್’ ಎಂದಿದ್ದರು

ಮನರೇಗಾ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಹಲವಾರು ಮಂತ್ರಿಗಳು ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ, ಈ ಯೋಜನೆಯನ್ನು ‘ನ್ಯಾಷನಲ್ ಪ್ರೈಡ್’ ಎಂದು ಕರೆಸಿದ್ದರು ಎಂದು ಪ್ರಿಯಾಂಕ್ ಖರ್ಗೆ ಸದನದ ಗಮನ ಸೆಳೆದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-05 11:50:58
No Reviews