2 ಲಕ್ಷ ರೂ. ಸಂಬಳದ ಕೇಂದ್ರ ಸರ್ಕಾರಿ ಜಾಬ್; ಅರ್ಜಿ ಶುರು!

ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಇಂಜಿನಿಯರ್‌ಗಳಿಗೆ ಇದು ಮಿಸ್ ಮಾಡಿಕೊಳ್ಳಬಾರದ ಅವಕಾಶ. ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ಈಗ ಭರ್ಜರಿ ವೇತನದೊಂದಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ವಿಶೇಷ ಅಂದ್ರೆ, ಕೆಲವು ಹುದ್ದೆಗಳಿಗೆ ತಿಂಗಳಿಗೆ 2 ಲಕ್ಷ ರೂ.ವರೆಗೆ ಸಂಬಳ ಸಿಗಲಿದೆ.

ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲಿಂಗ್ ಮತ್ತು ಟೆಲಿಕಾಂ ವಿಭಾಗಗಳಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ. BE/B.Tech ಪೂರ್ಣಗೊಳಿಸಿರುವ ಅನುಭವಿಗಳಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇನ್ನೂ ಒಂದು ಕುತೂಹಲಕಾರಿ ವಿಷಯ ಏನೆಂದರೆ, ಈ ನೇಮಕಾತಿಗೆ ಕಠಿಣ ಲಿಖಿತ ಪರೀಕ್ಷೆ ಇಲ್ಲ. ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮೇ 9 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ತಡ ಮಾಡಿದರೆ ಈ ಸುವರ್ಣಾವಕಾಶ ಕೈ ತಪ್ಪಬಹುದು. ಕೇಂದ್ರ ಸರ್ಕಾರದ ಸೌಲಭ್ಯಗಳು, HRA, ವೈದ್ಯಕೀಯ ಭತ್ಯೆ ಸೇರಿದಂತೆ ಹಲವು ಪ್ರಯೋಜನಗಳೊಂದಿಗೆ ಈ ಉದ್ಯೋಗ ಯುವಕರ ಗಮನ ಸೆಳೆಯುತ್ತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-08 15:36:27
No Reviews