ಅತಿ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆ ಪಡೆದ ಎಂ.ಎಸ್‌ ಧೋನಿ

ನವದೆಹಲಿ, ಮೇ 8: ಟೀಮ್ ಇಂಡಿಯಾದ ಮಾಜಿ ನಾಯಕ MS Dhoni ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ತೆರಿಗೆ ಪಾವತಿಯಲ್ಲಿ ಕೂಡ ಹೊಸ ದಾಖಲೆ ಬರೆದಿದ್ದಾರೆ. ಜಾರ್ಖಂಡ್ ಮತ್ತು ಬಿಹಾರದಲ್ಲಿ 2025–26 ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಎರಡು ರಾಜ್ಯಗಳಿಂದ ಒಟ್ಟಾಗಿ ಸುಮಾರು 20,000 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಅದರಲ್ಲಿ ಜಾರ್ಖಂಡ್‌ನಿಂದ ಮಾತ್ರ 12,000 ಕೋಟಿ ರೂ. ಸಂಗ್ರಹವಾಗಿದೆ. ಧೋನಿ ತಮ್ಮ ವೃತ್ತಿ ಆರಂಭದಿಂದಲೇ ನಿರಂತರವಾಗಿ ಟಾಪ್ ತೆರಿಗೆ ಪಾವತಿದಾರರಾಗಿ ಗುರುತಿಸಿಕೊಂಡಿದ್ದಾರೆ.

ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರವೂ MS Dhoni ಅವರು ಹೂಡಿಕೆ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ. ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿಗಳಾದ ಹೋಮ್‌ಲೇನ್ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಜೊತೆಗೆ ರಾಂಚಿಯಲ್ಲಿ 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯನ್ನೂ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2020ರಲ್ಲಿ ವಿದಾಯ ಹೇಳಿದ ಧೋನಿ, ಈಗ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಆದರೆ 2026 ಐಪಿಎಲ್‌ನಲ್ಲಿ ಗಾಯದ ಕಾರಣದಿಂದ ಅವರು ಇನ್ನೂ ಮೈದಾನಕ್ಕೆ ಮರಳಿಲ್ಲ, ಇದರಿಂದ ಅಭಿಮಾನಿಗಳಲ್ಲಿ ಕುತೂಹಲ ಮುಂದುವರಿದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-08 15:37:24
No Reviews