ಸಿದ್ದಗಂಗಾ ಮಠದ ಅಂಗಳದಲ್ಲಿ ‘ಮದರ್ ಪ್ರಾಮಿಸ್’ ಶೂಟಿಂಗ್: ಪ್ರಾರ್ಥನಾ ಗೀತೆ ಬರೆದ ಡಾಲಿ ಧನಂಜಯ

ಭಿನ್ನ ಪ್ರಚಾರ ಶೈಲಿ ಹಾಗೂ ವಿಭಿನ್ನ ಕಂಟೆಂಟ್ ಮೂಲಕ ಗಮನ ಸೆಳೆಯುತ್ತಿರುವ ‘ಮದರ್ ಪ್ರಾಮಿಸ್’ ಚಿತ್ರದ ಮತ್ತೊಂದು ವಿಶೇಷ ಗೀತೆ ಬಿಡುಗಡೆಯಾಗಿದೆ. ನಟ–ನಿರ್ಮಾಪಕ ‘ಡಾಲಿ’ ಧನಂಜಯ ಅವರು ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯನ್ನು ರಚಿಸಿದ್ದಾರೆ.

ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಅಂಗಳದಲ್ಲಿ “ಓ ಬೆಳಕೆ ಬಾ ಬೆಳಕೆ” ಎಂಬ ಸುಂದರ ಗೀತೆಯನ್ನು ಮಕ್ಕಳೊಂದಿಗೆ ಚಿತ್ರೀಕರಿಸಲಾಗಿದೆ. ಮಠದ ಪರಿಸರ, ಶಾಲೆ ಹಾಗೂ ಅಡುಗೆ ಕೋಣೆ ಸೇರಿದಂತೆ ಹಲವು ಸ್ಥಳಗಳಲ್ಲಿ ಮಕ್ಕಳ ನೈಸರ್ಗಿಕ ಸಂಭ್ರಮದ ನಡುವೆ ಹಾಡನ್ನು ಅರ್ಥಪೂರ್ಣವಾಗಿ ಸೆರೆಹಿಡಿಯಲಾಗಿದೆ. ಈ ಗೀತೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಭಾವನೆ, ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳ ಸಮ್ಮಿಶ್ರಣವಾಗಿರುವ ‘ಮದರ್ ಪ್ರಾಮಿಸ್’ ಚಿತ್ರದಲ್ಲಿ ಧನಂಜಯ ಅವರೊಂದಿಗೆ ನಾಗಭೂಷಣ್, ವಿನಯಪ್ರಸಾದ್, ಗೀತಾ, ಪ್ರಕಾಶ್ ಬೆಳವಾಡಿ, ಗುರುದತ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.

ಪೂರ್ಣ ಮೈಸೂರು ನಿರ್ದೇಶನದ ಈ ಚಿತ್ರಕ್ಕೆ ಶಶಾಂಕ್ ಸೋಹಲ್ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದು, ರಾಹುಲ್ ರಾಯ್ ಅವರ ಛಾಯಾಗ್ರಹಣ ಮತ್ತು ನವನೀತ್ ಶ್ಯಾಮ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ಶಕ್ತಿ ನೀಡಿದೆ.

ಡಾಲಿ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ಮದರ್ ಪ್ರಾಮಿಸ್’ ಜುಲೈ 10ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-07-02 12:47:09
No Reviews