ಮೊನಾಲಿಸಾ ಮದುವೆಗೆ ಟ್ವಿಸ್ಟ್ ಫೋಕ್ಸೊ ಕೇಸ್

ಕೇರಳದ ತಿರುವನಂತಪುರಂನ ಅರುಮನೂರ್ ಶ್ರೀ ನೈನಾರ್ ದೇವಸ್ಥಾನದಲ್ಲಿ ಪೋಷಕರ ವಿರೋಧದ ನಡುವೆಯೂ ಮೊನಾಲಿಸಾ–ಫರ್ಮಾನ್ ಖಾನ್ ಮದುವೆ ನಡೆದಿದ್ದು, ಇದೀಗ ವಯಸ್ಸಿನ ವಿವಾದದಿಂದ ಪ್ರಕರಣ ತೀವ್ರ ತಿರುವು ಪಡೆದಿದೆ. ದಾಖಲೆಗಳಲ್ಲಿ ವ್ಯತ್ಯಾಸ ಬೆಳಕಿಗೆ ಬಂದ ಹಿನ್ನೆಲೆ, ಫರ್ಮಾನ್ ವಿರುದ್ಧ ಅಪಹರಣ ಸೇರಿ ಫೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಕಾನೂನು ಸಂಕಷ್ಟ ಹೆಚ್ಚಾಗಿದೆ.

ಕಣ್ಣಿನ ಆಕರ್ಷಣೆಯಿಂದ ವೈರಲ್ ಆಗಿದ್ದ ಮೊನಾಲಿಸಾಗೆ ಸಿನಿ ಅವಕಾಶಗಳು ದೊರೆತಿದ್ದರೂ, ಪ್ರೇಮಕಥೆ ಈಗ ವಿವಾದದ ಕೇಂದ್ರವಾಗಿದ್ದು, ಪೋಷಕರ ವಿರೋಧ ಮತ್ತು ಕಾನೂನು ಕ್ರಮಗಳ ನಡುವೆ ಈ ಪ್ರಕರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-10 17:55:21
No Reviews