ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಶಾಕ್ ಮೂಡಿಸಿದ ಕೃತ್ಯ; ವಿಡಿಯೋ ವೈರಲ್!

ದೆಹಲಿಯಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ದಿನೇದಿನೇ ಗಂಭೀರವಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಮೆಟ್ರೋ ಆವರಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಬಹಿರಂಗವಾಗಿ ಮೂತ್ರ ವಿಸರ್ಜಿಸುವುದಲ್ಲದೆ, ಮಕ್ಕಳನ್ನೂ ಅದೇ ರೀತಿ ಮಾಡಲು ಬಿಡುತ್ತಿರುವ ದೃಶ್ಯಗಳು ಮರುಮರು ಕಾಣಿಸುತ್ತಿವೆ. ಈ ಸಂಬಂಧ ವಿಡಿಯೊ ಹಂಚಿಕೊಂಡ ಬಳಕೆದಾರರು, ದೆಹಲಿಯಲ್ಲಿ ಮೂಲಭೂತ ನಾಗರಿಕ ಜವಾಬ್ದಾರಿಯ ಕೊರತೆ ಗಂಭೀರವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು, ಜನರು ದೆಹಲಿ ಮೆಟ್ರೋವನ್ನು ಮನೆಯಂತೆ ಭಾವಿಸುತ್ತಿದ್ದಾರೆ. ಅವರು ಸುತ್ತಾಡುತ್ತಾರೆ, ಮೂತ್ರ ವಿಸರ್ಜಿಸುತ್ತಾರೆ, ತಮ್ಮ ಮನಬಂದಂತೆ ವರ್ತಿಸುತ್ತಾರೆ. ಸರ್ಕಾರ ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ದೆಹಲಿ ನಮ್ಮ ರಾಜಧಾನಿ; ಅದನ್ನು ಹಾಳುಮಾಡಲು ನಾವು ಬಯಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಒಂದೇ ಘಟನೆಯಲ್ಲ. ದೆಹಲಿ ಮೆಟ್ರೋದಲ್ಲಿ ನಡೆದ ಮತ್ತೊಂದು ನಾಚಿಕೆಗೇಡಿನ ಪ್ರಕರಣದಲ್ಲಿ, ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಹೊರಗೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಜನಸಮೂಹ ಸೇರಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದು, ವಿದೇಶಿಗನೊಬ್ಬ ಸಹ ಆತನ ವರ್ತನೆಯನ್ನು ಖಂಡಿಸಿದ್ದ ಘಟನೆ ವರದಿಯಾಗಿದೆ. ವಿದೇಶಿಗ ಸ್ವಯಂಸೇವಕರೊಂದಿಗೆ ಸಮೀಪದಲ್ಲೇ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅಸಭ್ಯ ಕೃತ್ಯ ಬೆಳಕಿಗೆ ಬಂದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಶಿಸ್ತಿನ ಅವಶ್ಯಕತೆಯನ್ನು ಮತ್ತೊಮ್ಮೆ ಒತ್ತಿ ಹೇಳಿದೆ.

ಇಂತಹ ಘಟನೆಗಳು ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ಮುಂಬೈನ ವಿರಾರ್ ಪ್ರದೇಶದಲ್ಲಿ ವಸತಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಡೆಲಿವರಿ ಬಾಯ್‌ವೊಬ್ಬ ಮೂತ್ರ ವಿಸರ್ಜನೆ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ಆತನ ವಿರುದ್ಧ ಪ್ರಕರಣವೂ ದಾಖಲಾಗಿತ್ತು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-20 14:39:19
No Reviews