ಮಹಿಳೆಯರಿಗೆ ನಿಷೇಧ, ಪುರುಷರಿಗೆ ಪ್ರವೇಶವಿಲ್ಲ!

ಶಬರಿಮಲೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಂದೆ ದೇಶದ ವಿವಿಧ ದೇವಾಲಯಗಳಲ್ಲಿ ಪುರುಷರಿಗೂ ಪ್ರವೇಶ ನಿರ್ಬಂಧವಿರುವ ವಿಚಾರ ಬೆಳಕಿಗೆ ಬಂದಿದೆ. ಧಾರ್ಮಿಕ ಆಚರಣೆಗಳ ಭಾಗವಾಗಿ ಲಿಂಗ ಆಧಾರಿತ ನಿಯಮಗಳು ಇರುವುದರಿಂದ ಇದು ತಾರತಮ್ಯವಲ್ಲ ಎಂದು ವಾದಿಸಲಾಗಿದೆ.

ಅಟ್ಟುಕಲ್ ಭಗವತಿ ಹಾಗೂ ಚಕ್ಕುಲತುಕಾವು ದೇವಾಲಯಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ವಿಶೇಷ ಆಚರಣೆಗಳ ಮೂಲಕ ನಂಬಿಕೆ ಮತ್ತು ಸಂಪ್ರದಾಯಗಳ ವಿಶಿಷ್ಟ ರೂಪ ಅನಾವರಣಗೊಳ್ಳುತ್ತಿದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-10 18:16:10
No Reviews