ಕರಿಷ್ಮಾ ಮಕ್ಕಳ ಪರ ಕೋರ್ಟ್ ತೀರ್ಪು ಮುಂದೇನು?

ಲಂಡನ್‌ನಲ್ಲಿ ಕಳೆದ ವರ್ಷ ಜೂನ್‌ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಸುಮಾರು ₹30,000 ಕೋಟಿ ಆಸ್ತಿಯನ್ನು ಸಂರಕ್ಷಿಸಲು ದೆಹಲಿ ಹೈಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ.

ಮೂರನೇ ಪತ್ನಿ ಪ್ರಿಯಾ ಸಚ್‌ದೇವ ಕಪೂರ್ ಮತ್ತು ಎರಡನೇ ಪತ್ನಿ ಕರಿಷ್ಮಾ ಕಪೂರ್ ಅವರ ಮಕ್ಕಳಾದ ಕಿಯಾನ್ ಮತ್ತು ಸಮೈರಾ ನಡುವಿನ ಆಸ್ತಿ ವಿವಾದದ ನಡುವೆ ಈ ತೀರ್ಪು ಹೊರಬಂದಿದೆ.

ನಕಲಿ ವಿಲ್ ಮತ್ತು ಅಪೂರ್ಣ ಆಸ್ತಿ ಮಾಹಿತಿಯ ಆರೋಪಗಳ ನಡುವೆ, ಕೋರ್ಟ್ ಎಲ್ಲಾ ಆಸ್ತಿಗಳನ್ನು ಸಂರಕ್ಷಿಸಲು ಹಾಗೂ ಯಾವುದೇ ಮಾರಾಟ ಅಥವಾ ವರ್ಗಾವಣೆ ನಡೆಯದಂತೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ವಿದೇಶಿ ಹೂಡಿಕೆಗಳು, ಕ್ರಿಪ್ಟೋ ಆಸ್ತಿ, ಐಷಾರಾಮಿ ಕುದುರೆಗಳು ಮತ್ತು ಬ್ರ್ಯಾಂಡ್ ವಾಚ್‌ಗಳು ಸೇರಿದಂತೆ ಸಂಪೂರ್ಣ ಆಸ್ತಿಯನ್ನು ರಕ್ಷಿಸಬೇಕೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಿಲ್‌ನ ಕಾನೂನು ಮಾನ್ಯತೆ ಇದೀಗ ಮುಂದಿನ ವಿಚಾರಣೆಯಲ್ಲಿ ನಿರ್ಧಾರವಾಗಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-30 18:15:40
No Reviews