ಎರಡು ದಿನಗಳಲ್ಲಿ ಉದ್ಯೋಗ ಹಬ್ಬ

ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಆಯೋಜಿಸಿರುವ ‘ಎಸ್.ಡಿ.ಎಂ ಉದ್ಯೋಗಂ – 2026’ ಬೃಹತ್ ಉದ್ಯೋಗ ಮೇಳದಲ್ಲಿ ಐಟಿ, ಫಾರ್ಮಾ, ಬ್ಯಾಂಕಿಂಗ್, ಐಟಿಇಎಸ್, ಸೇಲ್ಸ್ & ಮಾರ್ಕೆಟಿಂಗ್, ಶಿಕ್ಷಣ, ಪ್ರವಾಸೋದ್ಯಮ, ಉತ್ಪಾದನೆ, ಅಟೋಮೊಬೈಲ್, ಟೆಲಿಕಾಂ, ಮೀಡಿಯಾ, ಕನ್‌ಸ್ಟ್ರಕ್ಷನ್ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳು ಭಾಗವಹಿಸಿ ಉದ್ಯೋಗಾಕಾಂಕ್ಷಿಗಳಿಗೆ ವಿಸ್ತೃತ ಅವಕಾಶಗಳನ್ನು ಒದಗಿಸುತ್ತಿವೆ. ಪಿಯುಸಿ മുതൽ ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೋಮಾ ಹಾಗೂ ನರ್ಸಿಂಗ್ ಸೇರಿದಂತೆ ವಿವಿಧ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಹ ಮುಕ್ತ ಅವಕಾಶ ಕಲ್ಪಿಸಲಾಗಿದೆ. 

ಉದ್ಯೋಗ ಮೇಳಕ್ಕೆ ಈಗಾಗಲೇ ಗೂಗಲ್ ಫಾರ್ಮ್ ಮೂಲಕ 2000ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಸಂಪೂರ್ಣ ಪ್ರಕ್ರಿಯೆ ಪೇಪರ್‌ರಹಿತವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. ವಿಶೇಷವಾಗಿ ರೂಪಿಸಲಾದ ಸಾಫ್ಟ್‌ವೇರ್ ಮೂಲಕ ಸಂದರ್ಶನ ಫಲಿತಾಂಶವನ್ನು ಅಭ್ಯರ್ಥಿಗಳು ಮೊಬೈಲ್‌ನಲ್ಲೇ ತಿಳಿದುಕೊಳ್ಳಬಹುದಾಗಿದೆ. ಎರಡು ದಿನಗಳ ಈ ಬೃಹತ್ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-02 19:12:27
No Reviews