ಕೋಲ್ ಇಂಡಿಯಾದಲ್ಲಿ 276 ಹುದ್ದೆಗಳ ನೇಮಕಾತಿ

ಕೋಲ್ಕತ್ತಾ ಕೇಂದ್ರ ಕಚೇರಿಯುಳ್ಳ ಭಾರತ ಸರ್ಕಾರದ ಮಹತ್ವದ PSU ಸಂಸ್ಥೆ Coal India Limited ಇದೀಗ ದೊಡ್ಡ ನೇಮಕಾತಿ ಘೋಷಣೆಯೊಂದಿಗೆ ಗಮನ ಸೆಳೆದಿದೆ. ಗಣಿ ವಿಭಾಗದಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗಾಗಿ 276 ಅವಕಾಶಗಳು ತೆರೆದಿದ್ದು, ವಿಶೇಷವೆಂದರೆ ಈ ಬಾರಿ ಯಾವುದೇ ಪ್ರತ್ಯೇಕ ಲಿಖಿತ ಪರೀಕ್ಷೆಯಿಲ್ಲದೆ ಆಯ್ಕೆ ನಡೆಯಲಿದೆ.

ಆಯ್ಕೆ ಪ್ರಕ್ರಿಯೆಯ ಕೀ ಹೈಲೈಟ್ ಏನೆಂದರೆ, ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದು GATE 2025 ಅಂಕಗಳು. ಅಂದರೆ, ಈಗಾಗಲೇ ಪಡೆದಿರುವ ಸ್ಕೋರ್‌ನ ಆಧಾರದಲ್ಲೇ ಶಾರ್ಟ್‌ಲಿಸ್ಟಿಂಗ್ ನಡೆಯಲಿದೆ. ಇದು ಸ್ಪರ್ಧೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ 

ಅರ್ಹತೆ ವಿಚಾರದಲ್ಲೂ ಸ್ಪಷ್ಟ ನಿಯಮಗಳನ್ನು ಹಾಕಲಾಗಿದೆ. ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ BE/B.Tech ಪದವಿ ಕಡ್ಡಾಯವಾಗಿದ್ದು, ಸಾಮಾನ್ಯ ವರ್ಗಕ್ಕೆ ಕನಿಷ್ಠ 60% ಮತ್ತು SC/ST ಅಭ್ಯರ್ಥಿಗಳಿಗೆ 55% ಅಂಕಗಳ ಮಾನದಂಡ ನಿಗದಿಯಾಗಿದೆ. ವಯೋಮಿತಿ ಗರಿಷ್ಠ 30 ವರ್ಷ (30 ಏಪ್ರಿಲ್ 2026 ಅನ್ವಯ) ಆಗಿದ್ದು, ಸರ್ಕಾರಿ ನಿಯಮದಂತೆ OBC ಹಾಗೂ SC/ST ಅಭ್ಯರ್ಥಿಗಳಿಗೆ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ.

ವೇತನದ ವಿಚಾರ ಕೇಳಿದರೆ ಮತ್ತಷ್ಟು ಕುತೂಹಲ ಹೆಚ್ಚುತ್ತದೆ. ತರಬೇತಿ ಅವಧಿಯಲ್ಲೇ ಪ್ರತಿ ತಿಂಗಳು ₹60,000 ವೇತನ ನೀಡಲಾಗುತ್ತಿದ್ದು, ತರಬೇತಿ ಯಶಸ್ವಿಯಾಗಿ ಮುಗಿದ ನಂತರ ಇದು ಹುದ್ದೆಯ ಪ್ರಕಾರ ₹1.8 ಲಕ್ಷವರೆಗೆ ಏರಬಹುದು. 

ಅರ್ಜಿ ಶುಲ್ಕದಲ್ಲೂ ವಿಭಿನ್ನ ನಿಯಮ ಇದೆ. ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ ₹1,180 ಶುಲ್ಕ ನಿಗದಿಯಾಗಿದ್ದು, SC/ST ಮತ್ತು ಈಗಾಗಲೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಈಗಿನಿಂದಲೇ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಇದು ಎಂಜಿನಿಯರಿಂಗ್ ಪದವೀಧರರಿಗೆ “ಗೇಟ್ ಮೂಲಕ ಗ್ಯಾರಂಟಿ ಸರ್ಕಾರಿ ಜಾಬ್” ಎಂಬಂತಿರುವ ಅಪರೂಪದ ಅವಕಾಶವಾಗಿ ಕಾಣುತ್ತಿದೆ 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-09 16:38:54
No Reviews