ಭವಿಷ್ಯ ಬದಲಿಸುವ ಬುನಾದಿ ಇಟ್ಟಿಗೆ!

ಇದರ ಮುಂದುವರಿದ ಹೆಜ್ಜೆಯಾಗಿ ಭಾರತವು ಇದೀಗ ಇಸ್ರೇಲ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ದಿಕ್ಕಿನಲ್ಲಿ ಸಾಗಿರುವುದು ಗಮನಾರ್ಹ ಹಾಗೂ ಶ್ಲಾಘನೀಯ ಬೆಳವಣಿಗೆ. ಕ್ಷಿಪಣಿ ನಿರೋಧಕ ತಂತ್ರಜ್ಞಾನದಿಂದ ಹಿಡಿದು ರಕ್ಷಣಾ ವಲಯದ ಸಹಕಾರವರೆಗೆ ಹಲವು ಮಹತ್ವದ ಅಂಶಗಳು ಈ ಒಪ್ಪಂದದಲ್ಲಿ ಒಳಗೊಂಡಿರುವುದು ಅದರ ಮಹತ್ವವನ್ನು ಹೆಚ್ಚಿಸಿದೆ. ಜೊತೆಗೆ, ಇಸ್ರೇಲ್‌ನೊಂದಿಗೆ ವ್ಯಾಪಾರ ವಿಸ್ತರಣೆ ಮತ್ತು ಭಯೋತ್ಪಾದನೆ ವಿರುದ್ಧ ಪರಸ್ಪರ ಕೈಜೋಡಿಸುವ ಸಂಕಲ್ಪವೂ ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಬಾಂಧವ್ಯವು ಯಾವುದೇ ರಾಷ್ಟ್ರದ ಬಲವರ್ಧನೆಗೆ ಅತ್ಯಂತ ಅವಶ್ಯಕ ಅಂಶವೆಂಬುದು ಮತ್ತೆ ಸಾಬೀತಾಗಿದೆ.

ಸ್ವಾತಂತ್ರ್ಯೋತ್ತರ ಭಾರತ ಈ ಕ್ಷೇತ್ರಕ್ಕೆ ಸದಾ ಆದ್ಯತೆ ನೀಡುತ್ತಲೇ ಬಂದಿದೆ. ವಿಶೇಷವಾಗಿ ಕಳೆದೊಂದು ದಶಕದಲ್ಲಿ ಭಾರತದ ಜಾಗತಿಕ ಬಾಂಧವ್ಯಕ್ಕೆ ಹೊಸ ಆಯಾಮ ಸಿಕ್ಕಿದ್ದು, ಒಮ್ಮೆ ಭಾರತವನ್ನು ಲಘುವಾಗಿ ನೋಡುತ್ತಿದ್ದ ದೇಶಗಳೇ ಇಂದು ಸ್ನೇಹ ಹಂಬಲಿಸುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ‘ವಿಶ್ವಗುರು’ ಆಗುವ ದಾರಿಯಲ್ಲಿ ಭಾರತ ಇಡುವ ಹೆಜ್ಜೆಗಳು ಮತ್ತು ಎದುರಿಸುವ ಸತ್ವಪರೀಕ್ಷೆಗಳು ಕ್ರಮೇಣ ಫಲ ನೀಡುತ್ತಿರುವುದು ಧೈರ್ಯ ತುಂಬುವ ಸಂಗತಿ—ಇದು ಸಾರ್ಥಕ ಮತ್ತು ದೂರದರ್ಶಿ ರಾಷ್ಟ್ರ ನಾಯಕತ್ವದ ಸ್ಪಷ್ಟ ಪ್ರತಿಬಿಂಬವೂ ಹೌದು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-28 11:09:47
No Reviews