200 ಸ್ಟ್ರೈಕ್ ರೇಟ್‌ನಲ್ಲಿ ವೈಭವ್ ಸೂರ್ಯವಂಶಿ ಹೈವೋಲ್ಟೇಜ್ ಇನಿಂಗ್ಸ್

ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣ: ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಟಾಸ್ ಗೆದ್ದ ಅಫ್ಘಾನಿಸ್ತಾನ್ ಎ ನಾಯಕ ಇಮ್ರಾನ್ ಮಿರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎಗೆ ಆರಂಭಿಕರಾಗಿ ವೈಭವ್ ಸೂರ್ಯವಂಶಿ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಕಣಕ್ಕಿಳಿದರು. ಆರಂಭದಿಂದಲೇ ಆಕ್ರಮಣಕಾರಿ ಶೈಲಿಯಲ್ಲಿ ಆಡಿದ ವೈಭವ್ ಬ್ಯಾಕ್ ಟು ಬ್ಯಾಕ್ ಫೋರ್‌ಗಳನ್ನು ಸಿಡಿಸಿ ಅಫ್ಘಾನ್ ಬೌಲರ್‌ಗಳನ್ನು ಒತ್ತಡಕ್ಕೆ ಒಳಪಡಿಸಿದರು. ಮೊದಲ 7 ಓವರ್‌ಗಳಲ್ಲೇ ಭಾರತ ಎ 74 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಆದರೆ 8ನೇ ಓವರ್‌ನ ಮೊದಲ ಎಸೆತದಲ್ಲಿ ಅಪ್ಪರ್ ಕಟ್ ಶಾಟ್ ಆಡಲು ಯತ್ನಿಸಿದ ವೈಭವ್, ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಅವರ ಸ್ಫೋಟಕ ಇನಿಂಗ್ಸ್ 22 ಎಸೆತಗಳಲ್ಲಿ 44 ರನ್‌ಗಳಿಗೆ ಅಂತ್ಯವಾಯಿತು. ಈ ವೇಳೆ ಅವರು 9 ಭರ್ಜರಿ ಫೋರ್‌ಗಳನ್ನು ಸಿಡಿಸಿದ್ದರು. ಕೇವಲ 6 ರನ್ ಅಂತರದಲ್ಲಿ ಅರ್ಧಶತಕ ತಪ್ಪಿಸಿಕೊಂಡರು.

ವೈಭವ್ ಔಟಾದ ಬಳಿಕ ಪ್ರಿಯಾಂಶ್ ಆರ್ಯ 8 ರನ್‌ಗಳಿಗೆ ನಿರ್ಗಮಿಸಿದರು. ನಂತರ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ ತಂಡದ ಇನಿಂಗ್ಸ್ ಅನ್ನು ಮುಂದುವರೆಸಿದರು. 12 ಓವರ್‌ಗಳ ಅಂತ್ಯದ ವೇಳೆಗೆ ಭಾರತ ಎ 2 ವಿಕೆಟ್‌ಗೆ 104 ರನ್‌ಗಳನ್ನು ಕಲೆಹಾಕಿದೆ.

ಭಾರತ ಎ ಪ್ಲೇಯಿಂಗ್ XI: ವೈಭವ್ ಸೂರ್ಯವಂಶಿ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ರುತುರಾಜ್ ಗಾಯಕ್ವಾಡ್ (ನಾಯಕ), ತಿಲಕ್ ವರ್ಮಾ, ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ಅರ್ಷದ್ ಖಾನ್, ವಿಪ್ರಾಜ್ ನಿಗಮ್, ಅನ್ಕುಲ್ ರಾಯ್, ಅನ್ಶುಲ್ ಕಂಬೋಜ್.

ಅಫ್ಘಾನಿಸ್ತಾನ್ ಎ ಪ್ಲೇಯಿಂಗ್ XI: ಇಮ್ರಾನ್ ಮೀರ್ (ನಾಯಕ), ಹಸನ್ ಐಸಾಖಿಲ್, ಖಾಲಿದ್ ತನಿವಾಲ್, ಇಜಾಝ್ ಅಹ್ಮದ್, ಬಹೀರ್ ಶಾ, ಇಶಾಕ್ ರಹೀಮಿ (ವಿಕೆಟ್ ಕೀಪರ್), ಖಲೀಲ್ ಗುರ್ಬಾಝ್, ಝಹೀರ್ ಖಾನ್, ಅಬ್ದುಲ್ಲಾ ಅಹ್ಮದ್‌ಝಾಹಿ, ಮೊಹಮ್ಮದ್ ಇಬ್ರಾಹಿಂ, ಫರ್ಮಾನುಲ್ಲಾ ಸಫಿ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-11 11:21:30
No Reviews