IND vs NZ ಫೈನಲ್‌: ಅಂಪೈರ್‌ ಪಟ್ಟಿ ಇದೀಗ ಅಧಿಕೃತವಾಗಿ ಪ್ರಕಟ

ಅಹಮದಾಬಾದ್, ಮಾ.7:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2026ರ T20 World Cup final match ಫೈನಲ್ ಪಂದ್ಯಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಮಾರ್ಚ್ 8 ರಂದು ಅಹಮದಾಬಾದ್‌ನ Narendra Modi Stadium ನಲ್ಲಿ ನಡೆಯಲಿರುವ ಫೈನಲ್‌ ಎದುರಿನಲ್ಲಿ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್ ಆನ್-ಫೀಲ್ಡ್ ಅಂಪೈರ್ಗಳಾಗಿ ಸೇವೆ ಸಲ್ಲಿಸಲಿದ್ದಾರೆ.

ಫೈನಲ್‌ ಪಂದ್ಯ ಅಧಿಕಾರಿಗಳು

  • ಆನ್-ಫೀಲ್ಡ್ ಅಂಪೈರ್‌ಗಳು: ರಿಚರ್ಡ್ ಇಲ್ಲಿಂಗ್‌ವರ್ತ್, ಅಲೆಕ್ಸ್ ವಾರ್ಫ್

  • ಮೂರನೇ ಅಂಪೈರ್: ಅಲ್ಲಾಹುದ್ದೀನ್ ಪಾಲೇಕರ್

  • ನಾಲ್ಕನೇ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್

  • ಪಂದ್ಯದ ರೆಫರಿ: ಆಂಡಿ ಪೈಕ್ರಾಫ್ಟ್

ಅಂಪೈರ್‌ ಹೈಸ್ಟೋರಿ

  • **ರಿಚರ್ಡ್ ಇಲ್ಲಿಂಗ್‌ವರ್ತ್ಎರಡನೇ ಟಿ20 ವಿಶ್ವಕಪ್ ಫೈನಲ್‌; 2023 ಅಹಮದಾಬಾದ್ ODI ಫೈನಲ್ ಮತ್ತು ದುಬೈ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೂ ಅಂಪೈರ್ ಆಗಿದ್ದರು.

  • ಅಲೆಕ್ಸ್ ವಾರ್ಫ್: 2022 ಮಹಿಳಾ ODI ವಿಶ್ವಕಪ್ ಮತ್ತು 2023 ಪುರುಷರ ODI ವಿಶ್ವಕಪ್‌ನಲ್ಲಿ ಅಂಪೈರ್; ಇತ್ತೀಚಿನ T20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೋಲ್ಕತ್ತಾ ಈಡನ್ ಗಾರ್ಡನ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು; ಕಳೆದ ವರ್ಷ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಅಂಪೈರ್‌ಗಳಲ್ಲಿ ಸೇರಿಕೊಂಡರು.


ಮಳೆ ಅಥವಾ ಟೈ ಗೇಮ್‌ ನಿಯಮಗಳು

  • ಫೈನಲ್‌ಗೆ ಮೀಸಲು ದಿನ ವ್ಯವಸ್ಥೆ ಇದೆ; ಭಾನುವಾರ ಪಂದ್ಯ ನಡೆಯದಿದ್ದರೆ ಅಥವಾ 2ನೇ ಬ್ಯಾಟಿಂಗ್ ತಂಡಕ್ಕೆ ಕನಿಷ್ಠ 10 ಓವರ್‌ ನೀಡಲು ಆಗದಿದ್ದರೆ ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ.

  • ಪಂದ್ಯ ಟೈಗೊಂಡರೆ ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಸೂಪರ್ ಓವರ್ ಟೈಗೊಂಡರೆ ಫಲಿತಾಂಶ ಬರುವವರೆಗೆ ಮರುಮರು ಓವರ್‌ಗಳನ್ನು ಆಡಲಾಗುತ್ತದೆ.


ಸಂಗೀತ ರಸಮಂಜರಿ

ಫೈನಲ್ ಪಂದ್ಯಕ್ಕೆ ಮೊದಲು ಭರ್ಜರಿ ಮನರಂಜನೆ:

  • Ricky Martin – ಪ್ಯೂರ್ಟೋ ರಿಕೊ ಪ್ರಶಸ್ತಿ ವಿಜೇತ ಗಾಯಕ

  • Falgunie Pathak – ‘ದಾಂಡಿಯಾ ಕ್ವೀನ್’

  • Sukhwinder Singh – ಬಾಲಿವುಡ್ ಹಿನ್ನೆಲೆ ಗಾಯಕ

ಸ್ಟೇಡಿಯಂ ಗೇಟುಗಳು: ಮಧ್ಯಾಹ್ನ 3:30 ಕ್ಕೆ ತೆರೆಯಲಾಗುತ್ತದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-07 13:24:45
No Reviews