ICSE-ISC ಫಲಿತಾಂಶ ಶಾಕ್ ಬಾಲಕಿಯರ ಮೇಲುಗೈ

Council for the Indian School Certificate Examinations ಏಪ್ರಿಲ್ 30ರಂದು ಬೆಳಗ್ಗೆ 11 ಗಂಟೆಗೆ ICSE Examination ಮತ್ತು ISC Examination ಫಲಿತಾಂಶಗಳನ್ನು ಪ್ರಕಟಿಸಿದೆ.

ಈ ಬಾರಿ ಎರಡೂ ಪರೀಕ್ಷೆಗಳಲ್ಲಿ ಅಸಾಧಾರಣ ಉತ್ತೀರ್ಣ ಪ್ರಮಾಣ ದಾಖಲಾಗಿದ್ದು, ICSEನಲ್ಲಿ ಶೇ. 99.18 ಮತ್ತು ISCನಲ್ಲಿ ಶೇ. 99.13ರಷ್ಟು ಫಲಿತಾಂಶ ಬಂದಿದೆ.

ಬಾಲಕಿಯರು ಎರಡೂ ಹಂತಗಳಲ್ಲೂ ಬಾಲಕರಿಗಿಂತ ಉತ್ತಮ ಸಾಧನೆ ಮಾಡಿದ್ದು, ICSEನಲ್ಲಿ ಶೇ. 99.46 ಮತ್ತು ISCನಲ್ಲಿ ಶೇ. 99.48ರಷ್ಟು ಉತ್ತೀರ್ಣತೆ ಸಾಧಿಸಿದ್ದಾರೆ.

ಪ್ರಾದೇಶಿಕ ಮಟ್ಟದಲ್ಲಿ ದಕ್ಷಿಣ ಮತ್ತು ಪಶ್ಚಿಮ ವಲಯಗಳು ಮುಂಚೂಣಿಯಲ್ಲಿ ಇದ್ದು, ಒಟ್ಟಾರೆ ಫಲಿತಾಂಶದಲ್ಲಿ ಶ್ರೇಷ್ಠ ಪ್ರದರ್ಶನ ಕಂಡುಬಂದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-30 19:03:23
No Reviews