ಬಿಗ್ ಬಾಸ್ ಚಾಂಪಿಯನ್ ಗಿಲ್ಲಿ: ಹೃದಯ ಗೆದ್ದ ಕಥೆ

12ನೇ ಸೀಸನ್ ಬಿಗ್ ಬಾಸ್ ಚಾಂಪಿಯನ್ ಆಗಿ ಮೆರೆದ ಗಿಲ್ಲಿ

ಬೆಂಗಳೂರು: 12ನೇ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಗಿಲ್ಲಿ ನಟ, ಇಂದು ಕನ್ನಡಿಗರ ಮನೆಮಗನಾಗಿ ಹೊರಹೊಮ್ಮಿದ್ದಾರೆ. 113 ದಿನಗಳ ಕಾಲ ಪ್ರೇಕ್ಷಕರನ್ನು ಮನರಂಜಿಸಿ, ಕೋಟ್ಯಾಂತರ ಹೃದಯಗಳನ್ನು ಗೆದ್ದಿರುವ ಗಿಲ್ಲಿ, ದಿನದಿಂದ ದಿನಕ್ಕೆ ತಮ್ಮ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.


 ಬಂಪರ್ ಬಹುಮಾನಗಳ ಒಡೆಯ ಗಿಲ್ಲಿ

ಬಿಗ್ ಬಾಸ್ ಚಾಂಪಿಯನ್ ಆಗುವ ಮೂಲಕ ಗಿಲ್ಲಿ

  •  ಸುಮಾರು 60 ಲಕ್ಷ ರೂಪಾಯಿ ನಗದು ಬಹುಮಾನ

  • 20 ಲಕ್ಷ ರೂಪಾಯಿ ಮೌಲ್ಯದ ಸುಜುಕಿ ವಿಕ್ಟೋರಿಯಸ್ ಕಾರು
    ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಮಾನಕ್ಕಿಂತಲೂ ಜನರ ಪ್ರೀತಿ ಅವರ ದೊಡ್ಡ ಗೆಲುವಾಗಿದೆ.

 


ಗಿಲ್ಲಿಯನ್ನು ಯಾವಾಗಲೂ ಕಾಡುವ ಭಾವನಾತ್ಮಕ ಕ್ಷಣ ಯಾವುದು?

ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ನೀಡಿದ ಸಂದರ್ಶನವೊಂದರಲ್ಲಿ, ಗಿಲ್ಲಿ ತಮ್ಮನ್ನು ಸದಾ ಕಾಡುವ ಎಮೋಷನಲ್ ಮೂಮೆಂಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.


ಕನಕಪುರದ ಶೂಟಿಂಗ್ ವೇಳೆ ನಡೆದ ಮನಕಲಕುವ ಘಟನೆ

ಒಂದು ಸಿನಿಮಾದ ಶೂಟಿಂಗ್‌ಗಾಗಿ ಕನಕಪುರಕ್ಕೆ ಹೋಗಿದ್ದ ಸಂದರ್ಭವನ್ನು ಗಿಲ್ಲಿ ಮೆಲುಕು ಹಾಕಿದರು. ಶೂಟಿಂಗ್ ನಡೆಯುತ್ತಿದ್ದಾಗ, ಹಳ್ಳಿಯ ರಸ್ತೆ ಬದಿಯಲ್ಲಿ ನಿಂತಿದ್ದ ತಮ್ಮ ತಾಯಿ ವಯಸ್ಸಿನ ಮಹಿಳೆಯೊಬ್ಬರು ಗಿಲ್ಲಿಯನ್ನು ಮಾತನಾಡಿಸಲು ಕರೆದರು.


ಕೈ ಹಿಡಿದು ಅತ್ತ ಆ ತಾಯಿ…

ಡೈರೆಕ್ಟರ್ ಸೂಚನೆಯಂತೆ ಗಿಲ್ಲಿ ಅವರ ಬಳಿ ಹೋದಾಗ, ಆ ಮಹಿಳೆ ಅವರ ಕೈ ಹಿಡಿದು ಕಣ್ಣೀರಿಟ್ಟರು. ಗಿಲ್ಲಿ ಕಾರಣ ಕೇಳಿದಾಗ,

“ನೀನು ನಿಮ್ಮ ಅಪ್ಪ-ಅಮ್ಮನನ್ನು ಟಿವಿಗೆ ಕರೆದುಕೊಂಡು ಬಂದಿದ್ದೀಯಲ್ಲ,
ನಿಮ್ಮ ಅಮ್ಮನಿಗೆ ಗೆಜ್ಜೆ ತೊಡಿಸಿದ್ದೀಯಲ್ಲ,
ನಿಮ್ಮ ಅಪ್ಪನಿಗೆ ಬಟ್ಟೆ, ವಾಚ್ ಕೊಡಿಸಿದ್ದನ್ನು ನೋಡಿ ತುಂಬಾ ಖುಷಿಯಾಯ್ತು.
ನಿಜವಾಗಲೂ ಹುಟ್ಟಿದ್ರೆ ನಿನ್ನಂತ ಮಗ ಹುಟ್ಟಬೇಕು”
ಎಂದು ಹೇಳಿದರಂತೆ.


“ಆ ಕ್ಷಣ ನನ್ನ ಜೀವನ ಸಾರ್ಥಕವಾಯ್ತು” – ಗಿಲ್ಲಿ

ಆ ಮಾತುಗಳನ್ನು ಕೇಳಿ,

“ಭರ್ಜರಿ ಬ್ಯಾಚುಲರ್ ಶೋನಲ್ಲಿ ಮೊದಲ ಬಾರಿಗೆ ನನ್ನ ಅಪ್ಪ-ಅಮ್ಮನನ್ನು ಟಿವಿಗೆ ಕರೆದುಕೊಂಡು ಬಂದಿದ್ದೆ.
ಆ ತಾಯಿ ಹೇಳಿದ ಮಾತು ಕೇಳಿದಾಗ ನನ್ನ ಜೀವನ ಸಾರ್ಥಕವಾಯ್ತು ಅನ್ನಿಸ್ತು”
ಎಂದು ಗಿಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.


 ನಿಜವಾದ ಹೀರೋ ಆಗಿರುವ ಗಿಲ್ಲಿ

ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಸಂಸ್ಕಾರ, ಕುಟುಂಬ ಪ್ರೀತಿ ಮತ್ತು ಮಾನವೀಯತೆಯಿಂದ ಗಿಲ್ಲಿ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-22 12:08:17
No Reviews