ಮಹಾಕಾಳಿ ಪುತ್ರ ಟೈಟಲ್‌ ಅನಾವರಣ

ಇತ್ತೀಚಿನ ಸಿನಿಮಾಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೇರುಗಳಿಂದ ದೂರವಾಗುತ್ತಿರುವುದು ನೋವು ತಂದಿದೆ,” ಎಂದು ಹಿರಿಯ ನಿರ್ದೇಶಕ K. V. Prabhakar ಅಭಿಪ್ರಾಯಪಟ್ಟಿದ್ದಾರೆ. ರೈತನಿಂದ ಹಿಡಿದು ದೇಶ ಕಾಯುವ ಸೈನಿಕನ ತನಕ ಸಾಗುವ ಕಥೆಯ ಮೂಲಕ ಮಣ್ಣಿನ ಮೌಲ್ಯವನ್ನು ತೋರಿಸುವ ಪ್ರಯತ್ನವನ್ನು ಗಿರೀಶ್ ಮಾಡಿದ್ದಾರೆ. ಎತ್ತುಗಳ ಮೂಲಕ ವ್ಯವಸಾಯದಿಂದ ರೇಸ್‌ವರೆಗೆ ಇರುವ ವಿಭಿನ್ನ ಅಂಶಗಳನ್ನು ಚಿತ್ರದಲ್ಲಿ ಒಳಗೊಂಡಿದ್ದು, ರೈತರ ಬದುಕಿನ ಹೊಸ ಮುಖವನ್ನು ತೆರೆಗೆ ತರಲು ತಂಡ ಮುಂದಾಗಿದೆ.

ಮಾರ್ಚ್ 15ರಿಂದ ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ವಿವಿಧ ಭಾಷೆಗಳ ಕಲಾವಿದರು ನಟಿಸಲಿದ್ದಾರೆ. ಗಿರೀಶ್ ಗೌಡ ಅವರ ಕಥೆ-ಚಿತ್ರಕಥೆ ಹೊಂದಿರುವ ಈ ಚಿತ್ರವನ್ನು ದಸರಾ ವೇಳೆಗೆ ಬಿಡುಗಡೆ ಮಾಡುವ ಯೋಜನೆ ಇದೆ. ಶಿವಮೊಗ್ಗದ ಜಾತ್ರೆಯ ದೃಶ್ಯವನ್ನು ನೈಜವಾಗಿ ಚಿತ್ರೀಕರಿಸಲು ತಂಡ ಸಿದ್ಧತೆ ನಡೆಸಿದೆ. ಚಿತ್ರದಲ್ಲಿ ಒಂದೇ ಹಾಡಿದ್ದು, ಅದಕ್ಕೆ ಸಂಗೀತವನ್ನು Rahul Vastar ನೀಡಲಿದ್ದಾರೆ. ಛಾಯಾಗ್ರಹಣವನ್ನು Keerthan Poojari ನಿರ್ವಹಿಸಲಿದ್ದಾರೆ 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-10 19:24:24
No Reviews